ಇತ್ತೀಚಿನ ಸುದ್ದಿ
ದೇಶದಲ್ಲೇ ಅತಿ ಹೆಚ್ಚು | ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು
05/04/2026, 12:04
ಬೆಂಗಳೂರು(reporterkarnataka.com): ನಗರದ ವಿವಿಧೆಡೆ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಕಾರ್ಯಾಚರಣೆ ತೀವ್ರಗೊಂಡಿದೆ. ಇದುವರೆಗೆ ಬೆಂಗಳೂರಿನಿಂದ 272 ಅಕ್ರಮ ಬಾಂಗ್ಲಾ ವಲಸಿಗರನ್ನ ಗಡಿಪಾರು ಮಾಡಲಾಗಿದೆ.

ಈ ಪೈಕಿ 178 ಪುರುಷರು, 94 ಮಹಿಳೆಯರು ಮತ್ತು 12 ಮಕ್ಕಳು ಸೇರಿದ್ದಾರೆ. ಎಲ್ಲರನ್ನು ಪೊಲೀಸರು ಪತ್ತೆ ಮಾಡಿ ಒಟ್ಟಿಗೆ ಗಡಿಪಾರು ಮಾಡಿದ್ದಾರೆ. ಜೊತೆಗೆ ಸಿಸಿಬಿ ಪೊಲೀಸರು ಬಾಂಗ್ಲಾ ವಲಸಿಗರನ್ನ ಕರೆತರುತಿದ್ದವರ ಮೂಲಕ್ಕೆ ಕೈ ಹಾಕಿದ್ದಾರೆ. ಸಿಸಿಬಿ ಪೊಲೀಸರು ಇಡೀ ಬೆಂಗಳೂರಿನಾದ್ಯಂತ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ಶುರು ಮಾಡಿದ್ದಾರೆ. ಸದ್ಯ ಗುರುತಿಸಲಾದ ಅಕ್ರಮ ವಲಸಿಗರನ್ನು ತಮ್ಮ ದೇಶಕ್ಕೆ ಬಿಡುವ ಕೆಲಸ ಮುಂದುವರಿಸಿದ್ದಾರೆ. ತ್ರಿಪುರ ಗಡಿಯಿಂದ ಬಿಎಸ್ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಮೂಲಕ ಇವರನ್ನು ಗಡಿಪಾರು ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳ ಎಲೆಕ್ಷನ್ ಹಿನ್ನೆಲೆ ತ್ರಿಪುರಾ ಗಡಿಯಿಂದ ಗಡಿಪಾರು ಮಾಡಲಾಗುತ್ತಿದೆ.












