6:10 AM Tuesday26 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ಹೇಸಿಗೆ ಹುಟ್ಟಿಸುವ ಪಕ್ಷಾಂತರ ರಾಜಕೀಯ: ಅಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ; ಇಲ್ಲಿ ಕಾಂಗ್ರೆಸ್ ಬಿಟ್ಟು ಜನತಾದಳಕ್ಕೆ!!

20/04/2023, 23:09

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com

ಉತ್ತರ ಕರ್ನಾಟಕದಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕಾಂಗ್ರೆಸ್ ಸೇರಿದ್ದಾರೆ. ಕರಾವಳಿಯಲ್ಲಿ ಟಿಕೆಟ್ ಮಿಸ್ ಆಗಿರುವುದಕ್ಕೆ ಮಾಜಿ ಶಾಸಕರೊಬ್ಬರು ಅತ್ತು ರಂಪ ಮಾಡಿ ಕಾಂಗ್ರೆಸ್ ಬಿಟ್ಟು ಜನತಾದಳ ಸೇರ್ಕೊಂಡಿದ್ದಾರೆ. ಇವರಿಗೂ ಬೆಂಬಲಿಗರಿದ್ದಾರೆ. ಬಹು ಪರಾಕ್ ಹೇಳುವವರಿದ್ದಾರೆ.!

ಹುಬ್ಬಳ್ಳಿಯಲ್ಲಿ ಟಿಕೆಟ್ ಮಿಸ್ ಆಗಿರುವುದಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಡರ್ , ಅಥಣಿಯಲ್ಲಿ ಟಿಕೆಟ್ ಕೈಗೆಟಕದಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಶೆಟ್ಟರ್ ಅವರು ಬಿಜೆಪಿ ಮೂಲ ನಿವಾಸಿ. ಅವರೇನು ವಲಸಿಗ ಬಿಜೆಪಿಗನಲ್ಲ. ಆರೆಸ್ಸೆಸ್ ಮೂಲದಿಂದ ಬಂದ ಕಟ್ಟಾ ಬಿಜೆಪಿಗ. ಸುಮಾರು 40 ವರ್ಷಗಳ ಬಿಜೆಪಿಯೊಂದಿಗಿನ ಕರುಳು ಬಳ್ಳಿ ಸಂಬಂಧವನ್ನು ಕಡಿದು ಅವರು ಹೊರಗೆ ಬಂದಿದ್ದಾರೆ.
ಶೆಟ್ಟರ್ ವೈಯಕ್ತಿಕವಾಗಿ ತುಂಬಾ ಒಳ್ಳೆಯ ಮನುಷ್ಯ, ಸಜ್ಜನ ರಾಜಕಾರಣಿ. ಯಾವುದೇ ಹಗರಣ, ವಿವಾದದಲ್ಲಿ ಸಿಲುಕಿಹಾಕಿಕೊಂಡವರಲ್ಲ. ಆದರೆ ಮೇಲಿನಿಂದ ಹೇರುವ ಬಿಜೆಪಿಯ ಹೈಕಮಾಂಡ್ ಸಂಸ್ಕೃತಿ ವಿರುದ್ಧ ಶೆಟ್ಟರ್ ಬಂಡಾಯವೆದ್ದಿದ್ದಾರೆ.

ಮೃದು ಸ್ವಭಾವದ ಶೆಟ್ಟರ್ ಅವರು ಯಾವತ್ತೂ ಪಕ್ಷದ ಸಿದ್ದಾಂತದ ವಿರುದ್ಧ ಹೋದವರಲ್ಲ ಆದರೆ ಈ ಬಾರಿ ಅವರ ಸ್ವಾಭಿಮಾನಕ್ಕೆ ಸಿಕ್ಕಾಪಟ್ಟೆ ಘಾಸಿಯಾಗಿರುವುದು ಅವರು ಬಂಡಾಯ ಏಳಲು ಕಾರಣವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಶೆಟ್ಟರ್ ಬಿಜೆಪಿಯಿಂದ ಹೊರ ಬಂದರೂ ಅವರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದಿತ್ತು. ಆದರೆ ಶೆಟ್ಟರ್ ತನ್ನ ರಾಜಕೀಯ ಜೀವನದುದ್ದಕ್ಕೂ ವಿರೋಧಿಸುತ್ತಲೇ ಬಂದ ಕಾಂಗ್ರೆಸ್ ಸೇರಿದರು. ಇನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಆರೋಪಕ್ಕೊಳಗಾದವರು. ವಿಶೇಷವೆಂದರೆ ಕಾಂಗ್ರೆಸಿಗರು ಮೊನ್ನೆ ಮೊನ್ನೆಯವರೆಗೂ ಸವದಿ ಅವರಿಗೆ ಬ್ಲೂಫಿಲಂ ನೋಡಿದವರು ಎಂದು ಹಂಗಿಸುತ್ತಲೇ ಇದ್ದರು. ರಾಜಕೀಯದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎಂಬಂತೆ ಇದೀಗ ಲಕ್ಷ್ಮಣ ಸವದಿ ಕಾಂಗ್ರೆಸಿಗರಿಗೆ ಬಹಳ ನೆಂಟಸ್ಥರಾಗಿದ್ದಾರೆ. ಅದೇ ರೀತಿ ಬಿಜೆಪಿ ಕೂಡ ಕಾಂಗ್ರೆಸ್ ಮತ್ತು ಜನತಾ ದಳ ಶಾಸಕರನ್ನು ಆಪರೇಶನ್ ಕಮಲಕ್ಕೊಳಪಡಿಸಿ ಅಧಿಕಾರಕ್ಕೆ ಬಂದಿದೆ. ಜನಸಂಘದಿಂದ ರೂಪಾಂತರಗೊಂಡ ಬಿಜೆಪಿ ಈ ಹಿಂದಿನ ಜನಸಂಘದ ಹಾದಿಯಲ್ಲೇ ಸಾಗುತ್ತಿದ್ದರೆ ಖಂಡಿತವಾಗಿಯೂ ರಾಜ್ಯದಲ್ಲಿ ಆಪರೇಶನ್ ಕಮಲಕ್ಕೆ ಜಾಗ ಇರುತ್ತಿರಲಿಲ್ಲ.

ಇದೀಗ ಉತ್ತರ ಕರ್ನಾಟಕದ ಪಕ್ಷಾಂತರದ
ಕಥೆ ಈ ರೀತಿಯಾದರೆ ಕರಾವಳಿ ಕರ್ನಾಟಕದ ಮಂಗಳೂರು ಉತ್ತರ ಕ್ಷೇತ್ರದ ಕಥೆ ಕೂಡ ಒಂದು ರೀತಿಯಲ್ಲಿ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ತರಹವೇ ಇದೆ. ಇಲ್ಲಿ ಪಕ್ಷಾಂತರಕ್ಕೆ ಟಿಕೆಟ್ ಒಂದೇ ಕಾರಣ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ 11 ಮಂದಿ ಆಕಾಂಕ್ಷಿಗಳಿದ್ದರು. ಅವರಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಈ ಜಿದ್ದಾಜಿದ್ದಿನಲ್ಲಿ ಮೊಯ್ದೀನ್ ಬಾವಾ ಸೋಲು ಅನುಭವಿಸಿದ್ದಾರೆ. ಟಿಕೆಟ್ ಸಿಗದ ಜಿದ್ದಿನಲ್ಲಿ ಬಾವಾ ಅವರು ಮರುಕ್ಷಣವೇ ಜನತಾದಳ ಸೇರಿ ನಾಮಪತ್ರ ಸಲ್ಲಿಸಿದ್ದಾರೆ. ಬಾವಾ ಅವರ ಸಹೋದರ ಬಿ.ಎಂ. ಫಾರೂಕ್ ಅವರು ಜನತಾದಳದಿಂದ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅಣ್ಣ- ತಮ್ಮ ಒಂದೇ ಪಕ್ಷದಡಿಗೆ ಬಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು