ಇತ್ತೀಚಿನ ಸುದ್ದಿ
ಹೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಶೇಖರ್ ಬಹುರೂಪಿ ಮನೆಗೆ ಲೋಕಾಯುಕ್ತ ದಾಳಿ: 3 ಮನೆ, 3 ಎಕರೆ ಜಾಗ ಪತ್ತೆ
28/06/2023, 15:33
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ಹೆಸ್ಕಾಂ ನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶೇಖರ್ ಬಹುರೂಪಿ
ಅವರ ಮನೆ ಹಾಗೂ ಕಚೇರಿಗೆ ಲೋಕಾಯುಕ್ತ ದಾಳಿ ನಡೆಸಿದೆ.
ಅಕ್ರಮ ಆಸ್ತಿ ಗಳಿಕೆಯ ಪ್ರಕರಣದಲ್ಲಿ ಅವರ ಮನೆಯ ಮೇಲೆ ಬೆಳಗಾವಿ ಲೋಕಾಯುಕ್ತ ಡಿಎಸ್ ಪಿ ನೇತೃತ್ವದಲ್ಲಿ ತಂಡ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ ಧರ್ಮಟ್ಟಿ ಬೆಳಗಾವಿ, ಗೋಕಾಕ, ಹಗ್ರಿ ಬೊಮ್ಮನಹಳ್ಳಿ, ಅಥಣಿ ಹೀಗೆ ಹಲವು ಕಡೆ ದಾಳಿ ನಡೆಸಿದರು.
ಅಥಣಿಯಲ್ಲಿ 3 ಮನೆ, 3 ಎಕರೆ 20 ಗುಂಟೆ ಆಸ್ತಿ ಹೊಂದಿದ್ದು ದಾಖಲೆಗಳನ್ನು ವಶಪಡಿಸಿ ಪರಿಶೀಲನೆ ಕೈ ಗೊಂಡಿದ್ದಾರೆ.
ಈ ವೇಳೆ ಲೋಕಾಯುಕ್ತ ಸಿಬ್ಬಂದಿಗಳು ಹಾಗೂ ಅಥಣಿ ಪೊಲೀಸ್ ಠಾಣೆ ಸಿಬ್ಬಂದಿ ಗಳು ಉಪಸ್ಥಿತರಿದ್ದರು.