ಇತ್ತೀಚಿನ ಸುದ್ದಿ
ಅರಣ್ಯಕ್ಕೆ ಅಟ್ಟಿದ ಒಂದೇ ದಿನಕ್ಕೆ ಮತ್ತೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಕಾಡಾನೆ ಹಿಂಡು: ಸಿಸಿ ಕ್ಯಾಮೆರಾದಲ್ಲಿ ಸೆರೆ
12/09/2025, 11:48

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಮತ್ತೆ ಗ್ರಾಮಗಳ ಮನೆ ಅಂಗಳಕ್ಕೆ ಲಗ್ಗೆ ಇಟ್ಟಿವೆ.
ಒಂದು ದಿನದ ಹಿಂದೆಯಷ್ಟೇ ಅರಣ್ಯ ಇಲಾಖೆ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟಿದ್ದು, ಅದೇ ದಿನ ಕಟ್ಟಲಾಗುತ್ತಿದ್ದಂತೆ ಕರಡಿಗೋಡು ಸುಟ್ಟಮುತ್ತ ಓಡಾಟ ನಡೆಸಿರುವುದು ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಆನೆಗಳು ಕಾಡಿಗೆ ತೆರಳಿರಬಹುದು ಎಂದು ಕೆಲಸಕ್ಕೆ ಹಾಜರಾಗುತ್ತಿದ್ದ ಕಾರ್ಮಿಕರಲ್ಲಿ ಇದೀಗ ಮತ್ತೆ ಆತಂಕ ಉಂಟು ಮಾಡಿದೆ.