ಇತ್ತೀಚಿನ ಸುದ್ದಿ
ದೆಹಲಿಯಲ್ಲಿ ಮಿಂಚಿದ ಕೂಡ್ಲಿಗಿ ಶ್ರೀಪೇಟೆ ಬಸವೇಶ್ವರ ಸಂಗೀತ ಸಾಂಸ್ಕೃತಿಕ ಕಲಾ ತಂಡ: ರಾಜಧಾನಿಯಲ್ಲಿ ಹರಿದ ಸಂಗೀತ ಸುಧೆ!
02/03/2023, 12:42
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಪೇಟೆ ಬಸವೇಶ್ವರ ಸಾಂಸ್ಕೃತಿಕ ಹಾಗೂ ಸಂಗೀತ ಕಲಾ ಶಾಲೆ ದೆಹಲಿಯಲ್ಲಿನ ಕರ್ನಾಟಕ ಸಂಘ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಸಂಗೀತ ಹಾಗೂ ಕಲಾ ಪ್ರತಿಭೆಯನ್ನು ಪ್ರಸ್ತುತಪಡಿಸಿದೆ.
ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ, ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕಲಾ ಸಂಘದ ಸದಸ್ಯರು
ಪಾಲ್ಗೊಂಡಿದ್ದಾರೆ. ಈ ಮೂಲಕ ಕೂಡ್ಲಿಗಿ ಯ ಹೆಸರನ್ನು ನವ ದೆಹಲಿಯಲ್ಲಿ ಪರಿಚಯಿಸಿದ್ದು ಕಾರ್ಯಕ್ರಮದಲ್ಲಿ ನೆರೆದವರ ಮನದಲ್ಲಿ ಮನೆ ಮಾಡಿದ್ದಾರೆ. ಪ್ರತಿಯಾಗಿ ಕಾರ್ಯಕ್ರಮದ ಆಯೋಜಕರಿಂದ, ಪ್ರಶಂಸನಾ ಅಭಿನಂದನೆ ಪತ್ರ ಹಾಗೂ ಮೆಡಲ್ ಗಳನ್ನು ಪಡೆದಿದ್ದಾರೆ.









ನವದೆಹಲಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಸ್ವರ ಸಂಗೀತ ಶಾಲೆ ಸಾಂಸ್ಕ್ರತಿಕ ಕಲಾ ಟ್ರಸ್ಟ್ ಪದಾಧಿಕಾರಿಗಳಾದ, ಸಂಗೀತ ಹಾಗೂ ರಂಗಕಲಾವಿದರಾದ ಅಗಸಗಟ್ಟೆ ತಿಂದಪ್ಪ, ತಬಲಾ ವಾದಕರಾದ ಬಾಣದ ನರಸಿಂಹಪ್ಪ, ಡಿ.ವೆಂಕಟೇಶ, ಕುಪ್ಪನಕೇರಿ ಕೆ.ಶಂಕರಪ್ಪ, ರಂಗಕಲಾವಿದರಾದ ಸಾಸಲವಾಡ ಚನ್ನವೀರಸ್ವಾಮಿ, ವಿಭೂತಿ ವೀರಣ್ಣ ನವರು. ಭಾಗವಹಿಸಿದ್ದರು. ತಮ್ಮ ಕಲೆಯ ಮೂಲಕ ನವದೆಹಲಿಯಲ್ಲಿ, ಕೂಡ್ಲಿಗಿ ಯ ಕಲೆಯ ಸುಧೆಯನ್ನು ಹರಿಸಿದ ಕಲಾವಿದರನ್ನು ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಕಲಾವಿದರು ಹಾಗೂ ನಾರೀಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮಾಜ ಮುಖಂಡರು. ಜನಪ್ರತಿನಿಧಿಗಳು, ಕಲಾವಿದರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕಿನ ವಿವಿಧೆಡೆಯ ಕಲಾ ತಂಡದವರು, ಪತ್ರಕರ್ತರು ಅಭಿನಂದಿಸಿದ್ದಾರೆ.














