7:35 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಸಿನಿ ರಿಪೋರ್ಟ್ : ಹೇಗಿದೆ ರಾಜಣ್ಣನ ಸೌಂಡ್ ಆ್ಯಂಡ್ ಲೈಟ್ಸ್ !?

03/06/2022, 00:43

ಗಣೇಶ್ ಅದ್ಯಪಾಡಿ
info.reporterkarnataka@gmail.com

 

ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಬೋರ್ ಆಗದ ಹಾಗೆ ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಇರುವಂತಹ ಸಿನಿಮಾ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್.

ಹೌದು, ತುಳು ಸಿನಿಮಾ ರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿ ಗುಣಮಟ್ಟ ಹಾಗೂ ಪ್ರಸ್ತುತಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಸಿನಿಮಾಗಳಲ್ಲಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಎಂದು ಹೇಳಬಹುದು. ತುಳುನಾಡಿನಾದ್ಯಂತ ಮಾತ್ರವಲ್ಲದೆ ಹೊರ ಜಿಲ್ಲೆ ರಾಜ್ಯ ಮಾತ್ರವಲ್ಲದೆ ವಿದೇಶದಲ್ಲಿಯೂ ಯಶಸ್ವಿಯಾಗಿ ಪ್ರದರ್ಶನ ಕಂಡಿರುವ ಸಿನಿಮಾ ತುಳು ಸಿನಿ ಪ್ರೇಮಿಗಳ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.

ತುಳು ಪ್ರೇಕ್ಷಕರಿಗೆ ಇಷ್ಟ ಆಗುವ ಹಾಗೆ ಕಾಮಿಡಿಯ ಔತಣ ಮೊದಲ ಫ್ರೇಮ್‌ನಿಂದ ಕೊನೆಯ ಫ್ರೇಮ್‌ವರೆಗೂ ಸಾಗುತ್ತಾ ಬಂದಿದೆ. ಚೋಟು ಯಾನೆ ಉಮೇಶ್ ಮಿಜಾರ್, ರವಿ ರಾಮಕುಂಜ ಅವರ ಜೋಡಿ, ಅರವಿಂದ್ ಬೋಳಾರ್ ಹಾಗೂ ಬೋಜರಾಜ್ ವಾಮಂಜೂರು ಅವರ ಪುರುಸೆ ಹಾಗೂ ಮುರುಗನ ಪಾತ್ರಗಳು ಹಾಸ್ಯಕ್ಕೆ ಒಗ್ಗರಣೆಯನ್ನು ಹಾಕುತ್ತಾ ಕಥೆಯ ಜತೆಗೆ ಸಾಗುತ್ತದೆ.

ನವೀನ್ ಡಿ ಪಡೀಲ್ ಅವರು ಅವರ ಪರ್ಸನಾಲ್ಟಿಗೆ ಹೊಂದುವಂತಹ ಸೀರಿಯಸ್ ಪಾತ್ರಕ್ಕೆ ಬಣ್ಣ ಹಚ್ಚಿ ಪೋಷಕ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾದ ಅನೇಕ ಫ್ರೇಮ್‌ಗಳು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿತ್ತು ಹಾಗೂ ಕೆಲವೊಂದು ಕಡೆಗಳಲ್ಲಿ ಅದು ಲ್ಯಾಪ್ಸ್ ಆದ ಹಾಗೆ ಅನಿಸಿತು.

ನಿರ್ದೇಶಕ ರಾಹುಲ್ ಅಮೀನ್ ನಿರ್ದೇಶಕರಾಗಿ ಮೊದಲ ಸಿನಿಮಾವದರು ಬಹುತೇಕ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಹಾಗೂ ನಾಯಕ ನಟ ವಿನೀತ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿವಲ್ಲಿ ಯಶಸ್ವಿಯಾಗಿದ್ದಾರೆ.

ಮಾದಕ ನೋಟದ ನಾಯಕಿ ಯಶ ಹಾಗೂ ಕರಿಷ್ಮಾ ಅಮೀನ್ ಕೂಡ ಕಥೆಯ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ.

ಬಲೆ ತೆಲಿಪಾಲೆ ಮೂಲಕ ರಂಜಿಸಿದ್ದ ಪ್ರಶಂಸ ತಂಡ ಕೂಡ ಇಲ್ಲಿ ನಗಿಸುವ ಕೆಲಸವನ್ನು ನಾಜೂಕಾಗಿ ಮಾಡಿದೆ. ಪ್ರಸನ್ನ ಶೆಟ್ಟಿ ಬರೆದ ಸಂಭಾಷಣೆ ಕೂಡ ಕಾಮಿಡಿಗೆ ಪೂರಕವಾಗಿದೆ.

ಒಟ್ಟಾರೆಯಾಗಿ ಸಂಗೀತ ಬೀಟ್ ಸೊಗಸಾಗಿದ್ದು ಯುವಕರನ್ನು ಕುಣಿಯುವಂತೆ ಮಾಡುತ್ತದೆ ಆದರೆ ಸಿನಿಮಾದ ಹಾಡುಗಳು ಮನಸ್ಸಿನಲ್ಲಿ ಉಳಿಯುವಂತಹದು ಯಾವುದು ಇರಲಿಲ್ಲ ಎಂದು ಕಾಣುತ್ತದೆ. ಎಡಿಟಿಂಗ್ ಜಿಐ ವರ್ಕ್ ಸೊಗಸಾಗಿದೆ ಗ್ರೀನ್ ಸ್ಕ್ರೀನ್‌ನಲ್ಲಿ ಶೂಟ್ ಮಾಡಿದ ನೃತ್ಯದ ಕ್ವಾಲಿಟಿ ಎಲ್ಲಿಯೂ ಕಮ್ಮಿಯಾಗದಂತೆ ತಾಂತ್ರಿಕ ವರ್ಗ ಕಾಪಾಡಿಕೊಂಡಿದೆ.

ಸಿನಿಮಾ ಖಂಡಿತವಾಗಿಯೂ ಯಶಸ್ವಿಯಾಗಿದ್ದು, ಇನ್ನೂ ಹೆಚ್ಚಿನ ಗುಣಮಟ್ಟ ಹಾಗೂ ವೈವಿಧ್ಯಮಯ ಕಥೆಯ ತುಳು ಸಿನಿಮಾಗಳು ಈ ತಂಡದಿಂದ ಮೂಡಿ ಬರಲಿ.

ನಿರ್ಮಾಪಕರಾದ ಆನಂದ್ ಕುಂಪಲ ತಮ್ಮ ಮೊದಲ ಸಿನಿಮಾದಲ್ಲಿಯೇ ಹೊಸ ಸಂಚಲನ ಮೂಡಿಸಿದ್ದಾರೆ ಇನ್ನಷ್ಟು ಪ್ರಾಯೋಗಿಕ ತುಳು ಸಿನಿಮಾಗಳು ಇವರ ಮೂಲಕ ಬರಲಿ ಎನ್ನುವುದು ತುಳುವರ ಆಶಯ.

ಇತ್ತೀಚಿನ ಸುದ್ದಿ

ಜಾಹೀರಾತು