ಇತ್ತೀಚಿನ ಸುದ್ದಿ
ಹೆಬ್ರಿ: ಯೋಗಪಟು ತನುಶ್ರೀ ಪಿತ್ರೋಡಿ ಅವರಿಂದ ಭಾರತೀಯ ಯೋಗ ಕಲೆಯ ವಿಶಿಷ್ಟ ರಂಗ ಪ್ರಯೋಗ
02/11/2023, 16:44

ಹೆಬ್ರಿ(reporterkarnataka.com): ತನು ಯೋಗಭೂಮಿ ವತಿಯಿಂದ ಯೋಗಪಟು ತನುಶ್ರೀ ಪಿತ್ರೋಡಿ ಅವರಿಂದ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಯೋಗಕಲೆಯ ವಿಶಿಷ್ಟ ರಂಗ ಪ್ರಯೋಗವು ಹೆಬ್ರಿಯ ಎಸ್.ಆರ್. ಸಮೂಹ ಸಂಸ್ಥೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಎಸ್.ಆರ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ, ಉಪಪ್ರಾಂಶುಪಾಲರಾದ ಗುರುಪ್ರಸಾದ್, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಿತ್ರೋಡಿ ಅವರನ್ನು ಗೌರವಿಸಲಾಯಿತು. ಎಸ್.ಆರ್. ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು.