ಇತ್ತೀಚಿನ ಸುದ್ದಿ
ಹೆಬ್ಬೆ ಫಾಲ್ಸ್: ಕಾಲು ಜಾರಿ ಬಿದ್ದು ಹೈದರಾಬಾದಿನ ಯುವ ಪ್ರವಾಸಿಗ ದಾರುಣ ಸಾವು
10/06/2024, 23:09

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್ ನಲ್ಲಿ ಕಾಲು ಜಾರಿ ಬಿದ್ದು ಹೈದರಾಬಾದಿನ ಯುವ ಪ್ರವಾಸಿಗರೊಬ್ಬರು ಸಾವನ್ನಪ್ಪಿದ್ದಾರೆ.
ಹೈದರಾಬಾದ್ ಮೂಲದ ಯುವಕ ಶ್ರವಣ್ (25) ಎಂಬವರು ಬಂಡೆ ಮೇಲಿಂದ ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಾಫಿನಾಡಿಗೆ ಹೈದರಾಬಾದ್ ನಿಂದ ಇಬ್ಬರು ಯುವಕರು
ಪ್ರವಾಸ ಕೈಗೊಂಡಿದ್ದರು. ಇಂದು ಬೆಳಿಗ್ಗೆ ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್ ಗೆ ಇಬ್ಬರು ಸ್ನೇಹಿತರು ತೆರಳಿದ್ದರು. ಹೆಬ್ಬೆ ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯುವ ವೇಳೆಯಲ್ಲಿ ಕಾಲು ಜಾರಿ ಬಿದ್ದು ಶ್ರವಣ್ ಸಾವನ್ನಪ್ಪಿದ್ದಾರೆ.
ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.