ಇತ್ತೀಚಿನ ಸುದ್ದಿ
ಶೃಂಗೇರಿಯಲ್ಲಿ ಭಾರೀ ಮಳೆ: ಗಾಂಧಿ ಮೈದಾನ ಜಲಾವೃತ; ಭಕ್ತರ ಕಾರು ಮುಳುಗಡೆ, ಜನಜೀವನ ಅಸ್ತವ್ಯಸ್ತ
27/07/2025, 12:37

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡ ಮಲೆನಾಡಲ್ಲಿ ಬಿರುಸಿನ ಗಾಳಿ-ಮಳೆ ಮುಂದುವರಿದಿದ್ದು, ಭಾರೀ ವರ್ಷಧಾರೆಗೆ ಶೃಂಗೇರಿಯ ಬಹುತೇಕ ಭಾಗ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಶೃಂಗೇರಿ-ಕೊಪ್ಪ-ಮೂಡಿಗೆರೆ-ಕಳಸ-ಎನ್.ಆರ್.ಪುರದಲ್ಲಿ ಭಾರೀ ಗಾಳಿ-ಮಳೆಯಾಗುತ್ತಿದೆ.
ನಿರಂತರ ಧಾರಾಕಾರ ಮಳೆಗೆ ಶೃಂಗೇರಿಗರ ಜನಜೀವನ ಅಸ್ತವ್ಯಸ್ತಗೊಂಡಿದೆ. ಶೃಂಗೇರಿಯ ಸ್ಥಳೀಯ ನಿವಾಸಿಗಳ ಜತೆ ಶಾರದಾಂಬೆ ಭಕ್ತರು ಕಂಗಾಲಾಗಿದ್ದಾರೆ.
ತುಂಗಾ ನದಿಯ ಅಬ್ಬರಕ್ಕೆ ಪ್ರವಾಸಿಗರ ಕಾರುಗಳ ಮುಳುಗಡೆಯಾಗಿದೆ. ಗಾಂಧಿ ಮೈದಾನದಲ್ಲಿ ನಿಂತಿದ್ದ ಪ್ರವಾಸಿ ಕಾರುಗಳು ಜಲಾವೃತಗೊಂಡಿದೆ.
ನಿನ್ನೆ ಬೆಳಗ್ಗೆಯಿಂದಲೂ ಶೃಂಗೇರಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕ್ಷಣ-ಕ್ಷಣಕ್ಕೂ ತುಂಗಾ-ಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ತುಂಗಾ-ಭದ್ರಾ ನದಿಯ ಇಕ್ಕೆಲಗಳ ತೋಟಗಳು ಬಹುತೇಕ ಜಲಾವೃತಗೊಂಡಿದೆ.