ಇತ್ತೀಚಿನ ಸುದ್ದಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಕಡೂರು ಸಮೀಪದ ಹಡಗಲು ಗ್ರಾಮ ಅಕ್ಷರಶಃ ಜಲಾವೃತ
23/10/2025, 20:48

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಹಾಮಳೆಗೆ ಕಾಫಿನಾಡ ಬಯಲುಸೀಮೆಯಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿದೆ. ಚಿಕ್ಕಮಗಳೂರು-ಚಿತ್ರದುರ್ಗ ಗಡಿ ಭಾಗವಾಗಿರೋ ಕಡೂರು ತಾಲೂಕಿನ ಹಡಗಲು ಗ್ರಾಮ ಅಕ್ಷರಶಃ ಜಲಾವೃತಗೊಂಡಿದೆ.
ಡ್ರೋನ್ ಕಣ್ಣಲ್ಲಿ ರೈತರ ಬದುಕು ಜಲಾವೃತವಾದ ಕರುಣಾಜನಕ ದೃಶ್ಯ ಸೆರೆಯಾಗಿದೆ.
ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಜಲಾವೃತಗೊಂಡಿದೆ. ಎರಡು ದಶಕದ ಬಳಿಕ ಸುರಿದ ದಾಖಲೆ ಮಳೆಗೆ ಬಯಲುಸೀಮೆ ಜನರು ಕಂಗಾಲಾಗಿದ್ದಾರೆ. ರಾತ್ರಿ ವೇಳೆಯಲ್ಲಂತೂ ಮಳೆರಾಯ
ರೌದ್ರರೂಪ ತಾಳುತ್ತಿದ್ದಾನೆ.
ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಡಗಲು ಗ್ರಾಮದ ಜನರು ಕಂಗಾಲಾಗಿದ್ದಾರೆ. ತೋಟ, ಆಹಾರ ಬೆಳೆ ಯಾವುದನ್ನು ಬಿಡದಂತೆ ಮಳೆರಾಯ ಆವರಿಸಿಕೊಂಡಿದ್ದಾನೆ.
ಬೆಳೆ ಸ್ಥಿತಿ ಕಂಡ ಬಯಲುಸೀಮೆ ರೈತರು ಕಂಗಾಲಾಗಿದ್ದಾರೆ.