3:48 PM Sunday8 - February 2026
ಬ್ರೇಕಿಂಗ್ ನ್ಯೂಸ್
ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ*

ಇತ್ತೀಚಿನ ಸುದ್ದಿ

ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ ಭ್ರಷ್ಟಾಚಾರ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ

08/02/2026, 15:48

ಮೋಹನ್ ನಂಜನಗೂಡು ಮೈಸೂರು

info.repoeterkarnata@gmail.com

ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಒಬ್ಬ ಅಕ್ರಮ ಹಣ ಸಂಪಾದನೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿ ಪಂಚಾಯಿತಿ ಅಧ್ಯಕ್ಷರು, ಪ್ರಭಾವಿ ಸದಸ್ಯರು ಹಾಗೂ ಇಂಜಿನಿಯರ್ ಜೊತೆ ಶಾಮಿಲಾಗಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಸಿಎಂ ತವರು ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಕಂಚಮಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎಂದು ಗ್ರಾಮಸ್ಥರು ದಾಖಲೆ ಸಮೇತ ಆರೋಪ ಮಾಡಿ ಪ್ರತಿಭಟಿಸಿರುವ ಘಟನೆ ನಡೆದಿದೆ.
ಕಂಚಮಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯದರ್ಶಿಯಾಗಿ ಅದೇ ಪಂಚಾಯಿತಿಯಲ್ಲಿ ಪ್ರಭಾರ ಪಿಡಿಒ ಆಗಿ ಕಾರ್ಯನಿರ್ವಹಿಸಿರುವ ಶಿವು ಎನ್. ಎಂಬುವವನೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಆರೋಪಿಸಿ ಅದಕ್ಕೆ ಸಂಬಂಧಪಟ್ಟ ದಾಖಲೆ ಬಿಡುಗಡೆ ಮಾಡಿದ್ದಾರೆ.
2020ರಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವು ಎನ್. 2022ರಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ
ಸಂದರ್ಭದಲ್ಲಿ ಅಂದಿನ ಅಧ್ಯಕ್ಷರು ಮತ್ತು ಪ್ರಭಾವಿ ಸದಸ್ಯರುಗಳನ್ನು ಬಳಸಿಕೊಂಡು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ನಡೆಸದೆ ನಕಲಿ ಬಿಲ್ ಸೃಷ್ಟಿಸಿ ಲಕ್ಷ, ಲಕ್ಷ ಹಣ ದೋಚಿದ್ದಾರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ನಂದಿನಿ ಹಾಲಿನ ಬೂತ್ ತೆರೆಯಲು ಅನುಮತಿ ನೀಡಿ ಅದಕ್ಕೆ ವಿದ್ಯುತ್ ನೀಡಲು ಪಂಚಾಯಿತಿ ವತಿಯಿಂದ ಲಕ್ಷಾಂತರ ರೂಪಾಯಿ ಅಕ್ರಮ ವೆಸಗಿದ್ದಾರೆ. ಇನ್ನು ಸರ್ಕಾರಿ ಗೋಮಾಳ, ಗುಂಡು ತೋಪು ಜಾಗಕ್ಕೆ ಹಣ ಪಡೆದು ಕೆಲವರಿಗೆ ಮನೆ ಕಟ್ಟಲು ಅಕ್ರಮ ಲೈಸೆನ್ಸ್ ನೀಡಿದ್ದಾರೆ. ಸರ್ಕಾರಿ ಸವಲತ್ತುಗಳನ್ನು ಹಣ ಪಡೆದು ಉಳ್ಳವರಿಗೆ ನೀಡಿ ಬಡವರಿಗೆ ವಂಚನೆ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ 14 ಮತ್ತು 15ನೇ ಹಣಕಾಸು ಸೇರಿದಂತೆ ನರೇಗಾ ಯೋಜನೆಯಲ್ಲೂ ಭಾರಿ ಗೋಲ್ಮಾಲ್ ನಡೆಸಿದ್ದಾರೆ ಅಲ್ಲದೆ ಸ್ವಚ್ಛತೆ ಹಾಗೂ ವಿದ್ಯುತ್ ಬಲ್ಬ್ ಖರೀದಿಯಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಸೂರಿಲ್ಲದ ಬಡವರಿಗೆ ಸರ್ಕಾರದಿಂದ ಮನೆಗಳನ್ನು ನೀಡಿದರೆ ಅದನ್ನು ಬಡ ಫಲಾನುಭವಿಗಳಿಗೆ ನೀಡದೆ ವಾಪಸ್ ಕಳುಹಿಸಿರುವ ಘಟನೆಯು ಜರುಗಿದೆ. ಇನ್ನು ಕೊಟ್ಟಿಗೆ ನಿರ್ಮಾಣದಲ್ಲೂ ನಿಜವಾದ ಫಲಾನುಭವಿಗಳಿಗೆ ವಂಚನೆ ಮಾಡಿ ಉಳ್ಳವರ ಕೊಟ್ಟಿಗೆಗೆ ಸುಣ್ಣ ಬಣ್ಣ ಹೊಡೆದು ನಕಲಿ ಬಿಲ್ ಮಾಡಿ ಕೊಂಡಿದ್ದಾರೆ. ಮಳೆ ಹಾನಿಗೊಳಗಾದ ಮನೆಗಳಿಂದಲೂ ಅಕ್ರಮ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಅವರ ವಿರುದ್ಧ 10 ಹಲವು ಆಪಾದನೆಗಳನ್ನು ಮಾಡಿ ಗ್ರಾಮಸ್ಥರು ರೊಚ್ಚಿಗೆದ್ದರು.
ಪಂಚಾಯಿತಿಯಲ್ಲಿ ಕಸದ ವಾಹನ ಖರೀದಿಸಿ 4 ವರ್ಷಗಳಾದರು ಒಂದು ದಿನ ವಾಹನ ಬಳಕೆಯಾಗಿಲ್ಲ ಗ್ರಾಮದ ಚರಂಡಿ ಸ್ವಚ್ಛತೆ ಮಾಡದೆ ಲಕ್ಷಾಂತರ ರೂಪಾಯಿ ನಕಲಿ ಬಿಲ್ ಮಾಡಿಕೊಂಡಿರುತ್ತಾರೆ ಅಲ್ಲದೇ ಜುಲೈ 22, 2022 ರಂದು ಒಂದೇ ದಿನ ಯಾವುದೇ ಕಾರಣ ತೋರದೆ 8 ಲಕ್ಷಕ್ಕೂ ಅಧಿಕ ಹಣ ಡ್ರಾ ಮಾಡಿಕೊಂಡಿರುವುದು ಗ್ರಾಮಸ್ಥರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ
ಹಲವಾರು ವರ್ಷಗಳಿಂದ ಈ ಗ್ರಾಮ ಪಂಚಾಯಿತಿಯಲ್ಲಿ ಜಾಂಡ ಹೊಡೆದು ಸ್ಥಳೀಯ ಮುಖಂಡರ ಜೊತೆಗೂಡಿ ರಾಜಕೀಯ ಮಾಡುತ್ತಾ ಇಲ್ಲಿನ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಕೆಟ್ಟ ಹೆಸರು ತರುವಂತಹ ಕೆಲಸ ಮಾಡುತ್ತಿದ್ದಾರೆ. ಎಂದು ಆರೋಪಿಸಿದರು.
ಇವರು ಕಾರ್ಯದರ್ಶಿಯಾಗಿ ಬಂದ ಮೇಲೆ ಸುಮಾರು ಐದಾರು ಪಿಡಿಒಗಳು ಬಂದು ಹೋಗಿದ್ದಾರೆ ಕಾರಣ ಇವರು ತನ್ನ ಪ್ರಭಾವ ಬಳಸಿ ಹೊಸದಾಗಿ ಬಂದ ಪಿಡಿಒಗಳಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡದೆ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿಸಿ ಅವರನ್ನು ಪಂಚಾಯಿತಿಯಿಂದ ಹೊರ ಹೋಗುವಂತೆ ಮಾಡಿ ತಾನು ಪ್ರಭಾರ ಪಿಡಿಒ ಆಗಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಹಣ ಲೂಟಿ ಮಾಡಲು ಸ್ಕೆಚ್ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಇಂತಹ ವ್ಯಕ್ತಿಯನ್ನು ಈ ಕೂಡಲೇ ಅಮಾನತ್ತು ಮಾಡಿ ವರ್ಗಾವಣೆ ಮಾಡಿ ಇವನ ಅಕ್ರಮಗಳ ವಿರುದ್ಧ ತನಿಖೆ ನಡೆಸಬೇಕು ಇಲ್ಲವಾದಲ್ಲಿ ನಾವು ಸಂಬಂಧ ಪಟ್ಟ ಮೇಲಾಧಿಕಾರಿಗಳು ಹಾಗೂ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮದ ಮುಖಂಡ ಮಧು ಗುರುಸ್ವಾಮಿ, ವಕೀಲರಾದ ತುಂಟಾದಾರ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಎನ್. ನಾಗರಾಜ್, ಗೌಡಿಕೆ ಚಿಕ್ಕೂಸಪ್ಪನ ರಾಮಣ್ಣ, ಆರ್‌ಟಿಐ ಕಾರ್ಯಕರ್ತ ನರಸಿಂಹ, ರೈತ ಮುಖಂಡ ರಾಜೇಶ್, ಮಹದೇವಪ್ಪ, ಗೌಡಿಕೆ ಪರಮೇಶಪ್ಪನವರ ಮಗ ನಾಗರಾಜು , ಮಹೇಶಕುಮಾರ್ ( ರೆಡ್ಡಿ) ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಯುವಕರು ಮಾತನಾಡಿ ಆತನ ಅಕ್ರಮ ಹಾಗೂ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು