ಇತ್ತೀಚಿನ ಸುದ್ದಿ
ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವಿನ ಸೆರೆ: ಕಳಸದಲ್ಲಿ ಕಂಡು ಬಂದ ಅಳಿವಿನಂಚಿನಲ್ಲಿರುವ ಉರಗ
07/10/2023, 23:54
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವನ್ನು ಕಾಫಿನಾಡ ಕಳಸದಲ್ಲಿ ಸೆರೆ ಹಿಡಿಯಲಾಗಿದೆ. ಇದು ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವವು ಆಗಿದೆ.
ಪಶ್ಚಿಮ ಘಟ್ಟದಲ್ಲಿರುವ ಅಳಿವಿನಂಚಿನ ಉರಗದ ಸಂತತಿಗೆ ಇದು ಸೇರುತ್ತದೆ. ತಲೆ ಮೇಲೆ ಬಿದ್ದ ನೀರನ್ನ ಹಾಗೇ ಹೀರಿಕೊಳ್ಳುವ ಅಪರೂಪದ ಉರಗ ಇದಾಗಿದೆ.
ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ಈ ಅಪರೂಪದ ಹಾವನ್ನು ಹಿಡಿಯಲಾಗಿದೆ.
ದೇವಸ್ಥಾನದ ಪಕ್ಕದ ಚಂದ್ರು ಭಟ್ ಮನೆಯ ಅಂಗಳದಲ್ಲಿದ್ದ ಬ್ಯಾಂಬೋ ಪಿಟ್ ವೈಫರ್ ಹಾವು ಕಂಡು ಬಂದಿತ್ತು.
ಹೆಚ್ಚಾಗಿ ಈ ಹಾವು ಬಿದಿರಿನ ಬಂಬಿನಲ್ಲಿ ವಾಸವಿರುವ ಕಾರಣ ಬ್ಯಾಂಬೋ ಪಿಟ್ ವೈಫರ್ ಹಾವು ಎಂದು ಕರೆಯುತ್ತಾರೆ.
ಈ ಹಾವು ಕಡಿದರೆ ಸಾಯುವುದಿಲ್ಲ, ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ. ಅಪರೂಪದ ಹಾವಿನ ಸೌಂದರ್ಯ ನೋಡಿ
ಸ್ಥಳಿಯರು ಖುಷಿ ಪಟ್ಟಿದ್ದಾರೆ.ಅಪರೂಪದ ಹಾವನ್ನ ಸೆರೆ ಹಿಡಿದ ರಿಜ್ವಾನ್ ಅರಣ್ಯಕ್ಕೆ ಬಿಟ್ಟಿದ್ದಾರೆ.