ಇತ್ತೀಚಿನ ಸುದ್ದಿ
ಹಟ್ಟಿ ಚಿನ್ನದ ಗಣಿಯಲ್ಲಿ ಮುಂಜಾನೆ ಭಾರೀ ಭೂಕುಸಿತ: ಓರ್ವ ಸಾವು; 3 ಮಂದಿ ಗಂಭೀರ
12/07/2024, 11:26
ಶಿವು ರಾಠೋಡ ಹುಣಸಗಿ ರಾಯಚೂರು
info.reporterkarnataka@gmail.com
ಇಲ್ಲಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಭೂ ಕುಸಿತವಾಗಿದ್ದು, ಒಬ್ಬ ಕಾರ್ಮಿಕ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಣಿ ಕಂಪನಿ ಭೂ ಕೆಳಮೈ ವಿಭಾಗದಲ್ಲಿ ಮಣ್ಣು ಕುಸಿತವಾಗಿದೆ. ಮಲ್ಲಪ್ಪ ಶಾಫ್ಟ್ ವಿಭಾಗದಲ್ಲಿ ದುರ್ಘಟನೆ ಸಂಭವಿಸಿದೆ. ಮೌನೇಶ್ ಎನ್ನುವ ಕಾರ್ಮಿಕ ಸಾವಗೀಡಾಗಿದ್ದಾನೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಗಣಿ ಕಂಪನಿ ಆಸ್ಪತ್ರೆಗೆ ಕಾರ್ಯ ನಿರ್ವಾಹಕ ನಿರ್ದೇಶಕ, ಪ್ರಧಾನ ವ್ಯವಸ್ಥಾಪಕ ಹಾಗೂ ಉಪಪ್ರಧಾನ ವ್ಯವಸ್ಥಾಪಕರು, ಅಧಿಕಾರಿಗಳು ಕಾರ್ಮಿಕ ಸಂಘದ ಮುಖಂಡರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿಧಿವಶರಾದ ಕಾರ್ಮಿಕನನ್ನು ಮೌನೇಶ್ ಎಂದು ಗುರುತಿಸಲಾಗಿದೆ. ಬೂದಿಬಸವ, ರಂಗಸ್ವಾಮಿ ಹಾಗೂ ಮತ್ತುವೋರು ಗಂಭೀರ ಗಾಯಗೊಂಡ ಕಾರ್ಮಿಕರು.