ಇತ್ತೀಚಿನ ಸುದ್ದಿ
ಹಾಸನ ಸಮೀಪ ಭೀಕರ ರಸ್ತೆ ಅಪಘಾತ: ಬೆಳ್ತಂಗಡಿ ಇಂದಬೆಟ್ಟಿನ 3 ಮಂದಿ ಸಾವು; ಇಬ್ಬರು ಗಂಭೀರ
19/06/2021, 23:50

ಹಾಸನ(reporterkarnataka news): ಇಲ್ಲಿನ ಕೆಂಚಟ್ಟಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂವರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮೃತರನ್ನು ಇಂದಬೆಟ್ಟು ಗ್ರಾಮದ ಕುತ್ರಬೆಟ್ಟುವಿನವರು ಎಂದು ಗುರುತಿಸಲಾಗಿದೆ.
ಎದುರಿನಿಂದ ಸಾಗುತ್ತಿದ್ದ ಲಾರಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಹಿಂದುಗಡೆಯಲ್ಲಿ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.