6:13 AM Tuesday26 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ಹಾಸನ: ಮಂಗಳೂರಿನ ಕೆಎಂಸಿ ಆಸ್ಪತ್ರೆಯಿಂದ ಔಟ್‍ರೀಚ್ ಸ್ಪೆಷಾಲಿಟಿ ಕ್ಲಿನಿಕ್ ಆರಂಭ; ಗುಣಮಟ್ಟದ ಆರೋಗ್ಯ ಸೇವೆ

01/09/2021, 08:07

ಹಾಸನ(reporterkarnataka.com): ಹಾಸನ ಹಾಗೂ ಸುತ್ತ ಮುತ್ತಲ ಭಾಗಗಳ ಜನರಿಗೆ ಗುಣಮಟ್ಟದ ಆರೋಗ್ಯ ಕಾಳಜಿ ಸೇವೆಯು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಂಗಳೂರಿನ ಕೆಎಂಸಿ ಹಾಸ್ಪಿಟಲ್ಸ್, ಔಟ್‍ರೀಚ್ ಸ್ಪೆಷಾಲಿಟಿ ಕ್ಲಿನಿಕ್ ಒಂದನ್ನು ಇತ್ತೀಚೆಗಷ್ಟೇ ಆರಂಭಿಸಿದೆ. 

ಮಲ್ಟಿ-ಡಿಸಿಪ್ಲಿನರಿ (ಬಹು ಶಿಸ್ತಿನ) ಸೇವೆಗಳನ್ನು ಈ ಕ್ಲಿನಿಕ್ ಒದಗಿಸಲಿದ್ದು, ಈ ಕೆಳಗೆ ನೀಡಿರುವ ದಿನ ಹಾಗೂ ಸಮಯದಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರು ಕ್ಲಿನಿಕ್‍ಗೆ ಭೇಟಿ ನೀಡಲಿದ್ದಾರೆ.

•ಡಾ. ಹರೂನ್ ಹೆಚ್, ಕನ್ಸಲ್ಟಂಟ್ ಇಂಟರ್ನಲ್ ಮೆಡಿಸಿನ್, ಇವರು ತಿಂಗಳ ಮೊದಲ ಹಾಗೂ ಮೂರನೇ ಗುರುವಾರಗಳಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಭ್ಯವಿರಲಿದ್ದು, ಮಧುಮೇಹ, ಕೊಲೆಸ್ಟ್ರಾಲ್ (ಕೊಬ್ಬು) ಮತ್ತು ಅಧಿಕ ರಕ್ತದೊತ್ತಡ ನಿರ್ವಹಣೆ, ಥೈರಾಯ್ಡ್, ವಯೋ ಸಂಬಂಧಿ ಆರೋಗ್ಯ ಸಮಸ್ಯೆಗಳು ಹಾಗೂ ಇತರೆ ಕಾಯಿಲೆಗಳನ್ನು ಹೊಂದಿರುವ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆಗಳನ್ನು ನೀಡಲಿದ್ದಾರೆ.

•ಡಾ. ಸಮೀನಾ ಹೆಚ್, ಕನ್ಸಲ್ಟಂಟ್ ಒಬಿಜಿ, ಇವರು ತಿಂಗಳ ಮೊದಲ ಹಾಗೂ ಮೂರನೇ ಗುರುವಾರಗಳಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಭ್ಯವಿರಲಿದ್ದು, ಪ್ರಸೂತಿ ಮತ್ತು ಸ್ತ್ರೀರೋಗಗಳು ಅಂದರೆ, ಹೆಚ್ಚಿನ ಅಪಾಯವಿರುವ ಗರ್ಭಧಾರಣೆ (ಹೈ ರಿಸ್ಕ್ ಪ್ರೆಗ್ನೆನ್ಸಿ), ಬಂಜೆತನ, ಮೆನೋಪೌಸಲ್ ಡಿಸಾರ್ಡರ್ (ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳು), ಗರ್ಭನಿರೋಧಕತೆ ಮತ್ತು ಕುಟುಂಬ ಯೋಜನೆ, ಗೈನಾ ಕ್ಯಾನ್ಸರ್, ಇತ್ಯಾದಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರೋಗಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

•ಡಾ. ಸತ್ಯನಾರಾಯಣ, ಕನ್ಸಲ್ಟಂಟ್ ಸರ್ಜಿಕಲ್ ಗ್ಯಾಸ್ಟ್ರೋಯೆಂಟರಾಲಜಿ, ಇವರು ಪ್ರತಿ ತಿಂಗಳ ಮೊದಲ ಗುರುವಾರದಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕ್ಲಿನಿಕ್‍ನಲ್ಲಿ ಲಭ್ಯವಿರಲಿದ್ದು, ಪಿತ್ತಕೋಶದ ಕಲ್ಲುಗಳು, ಮೇದೋಜ್ಜೀರಕ ಗ್ರಂಥಿಯ ಕಲ್ಲುಗಳು ಅಥವಾ ಗ್ಯಾಸ್ಟ್ರೋಯೆಂಟರಾಲಾಜಿಕಲ್‍ಗೆ ಸಂಬಂಧಿಸಿದ ಈ ಹಿಂದಿನ ಸಮಸ್ಯೆಗಳು ಅಥವಾ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಇರುವ ತೊಡಕುಗಳ ಬಗ್ಗೆ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆ ನೀಡಲಿದ್ದಾರೆ.

•ಡಾ. ಯೋಗೇಶ್ ಡಿ. ಕಾಮತ್, ಸೊಂಟ (ಚಪ್ಪೆ) ಮತ್ತು ಮಂಡಿ ಹಾಗೂ ಕ್ರೀಡೆ ವೇಳೆ ಉಂಟಾಗುವ ಗಾಯಗಳ ವಿಶೇಷ ತಜ್ಞರು, ಇವರು ಪ್ರತಿ ತಿಂಗಳ ಮೊದಲ ಶನಿವಾರದಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಭ್ಯವಿರಲಿದ್ದು, ಸೊಂಟ ಮತ್ತು ಮಂಡಿ ಕೀಲುಗಳು, ಕೀಲುಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಆಗಿರುವ ಸರ್ಜರಿಗಳ ಪುನರ್ ಅವಲೋಕನ, ಕ್ರೀಡೆ ವೇಳೆ ಉಂಟಾಗುವ ಗಾಯಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ರೋಗಗಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

•ಡಾ. ಈಶ್ವರಕೀರ್ತಿ, ಕನ್ಸಲ್ಟಂಟ್ ಸ್ಪೈನ್ ಸರ್ಜನ್ (ಬೆನ್ನುಮೂಳೆ ಶಸ್ತ್ರಚಿಕಿತ್ಸಕ), ಇವರು ಪ್ರತಿ ತಿಂಗಳ 3ನೇ ಶನಿವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕ್ಲಿನಿಕ್‍ನಲ್ಲಿ ಭೇಟಿಗೆ ಸಿಗಲಿದ್ದು, ಈ ವೇಳೆ ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಗಳು, ಬೆನ್ನುಮೂಳೆಯ ವಿರೂಪತೆ ಸರಿಪಡಿಸುವಿಕೆ, ಡಿಸ್ಕ್ ಸರಿದಿರುವಿಕೆ ಸೇರಿ ಬೆನ್ನುಮೂಳಗೆ ಸಬಂಧಿಸಿದ ಎಲ್ಲ ಸಮಸ್ಯೆಗಳ ಕುರಿತಂತೆ ಚಿಕಿತ್ಸೆ ನೀಡಲಿದ್ದಾರೆ.

•ಡಾ. ಸನ್ಮಾನ್ ಗೌಡ, ಕನ್ಸಲ್ಟಂಟ್ ಯೂರಾಲಜಿ, ಇವರು ಪ್ರತಿ ತಿಂಗಳ ಮೂರನೇ ಶನಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 2 ಗಂಟೆಯವರೆಗೆ ಕ್ಲಿನಿಕ್‍ನಲ್ಲಿ ಲಭ್ಯವಿರಲಿದ್ದು, ಮೂತ್ರದ ಕಲ್ಲು, ಮೂತ್ರದ ಸೋಂಕು, ಪ್ರಾಸ್ಟೇಟ್ ಮತ್ತು ಮೂತ್ರಶಾಸ್ತ್ರ ಸಂಬಂಧಿ ಸಮಸ್ಯೆಗಳ ಕುರಿತಂತೆ ರೋಗಗಿಗಳ ಜೊತೆ ಸಮಾಲೋಚನೆ ನಡೆಸಿ ಸಲಹೆಗಳನ್ನು ನೀಡುವರು.

ಈ ಸಹಭಾಗಿತ್ವದ ಕುರಿತು ಮಾತನಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾಂತೀಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾಗಿರುವ ಡಾ. ಸಘೀರ್ ಸಿದ್ದಿಕಿ ಅವರು, “ಔಟ್‍ರೀಚ್ ಸ್ಪೆಷಾಲಿಟಿ ಕ್ಲಿನಿಕ್ ಅನ್ನು ಆರಂಭಿಸುವ ನಿಟ್ಟಿನಲ್ಲಿ ಸೆಕ್ಯೂರ್ ಹಾಸ್ಪಿಟಲ್ (ವಾತ್ಸಲ್ಯ ಹಾಸ್ಪಿಟಲ್‍ನ ಒಂದು ಘಟಕ) ಜೊತೆ ಸಹಭಾಗಿತ್ವ ಸಾಧಿಸಿರುವುದು ನಮಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಇಂದಿನ ಅನಿಶ್ಚಿತ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿ ಗುಣಮಟ್ಟದ ಆರೋಗ್ಯ ಕಾಳಜಿ ಸೇವೆಯನ್ನು ಪಡೆಯುವುದು ಬಹುಮುಖ್ಯ ಅಗತ್ಯವಾಗಿದ್ದು, ಈ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಈ ನೂತನ ಔಟ್‍ರೀಚ್ ಸ್ಪೆಷಾಲಿಟಿ ಕ್ಲಿನಿಕ್ ಬಹುಮುಖ್ಯ ಪಾತ್ರವನ್ನು ನಿರ್ವಹಿಸಲಿದೆ. ಈ ಮೂಲಕ ಹಾಸನ ಭಾಗದ ಜನತೆ ಗುಣಮಟ್ಟದ ಚಿಕಿತ್ಸೆಗಾಗಿ ರಾಜ್ಯದ ಇತರೆ ನಗರಗಳು ಅಥವಾ ಬೇರೆ ರಾಜ್ಯಗಳಿಗೆ ಪ್ರಯಾಣಿಸುವ ಅನಿವಾರ್ಯತೆ ತಪ್ಪಲಿದ್ದು, ಹಾಸನ ನಗರದಲ್ಲಿಯೇ ಮಲ್ಟಿ ಡಿಸಿಪ್ಲಿನರಿ ಆರೋಗ್ಯ ಸೇವೆಗಳು ಲಭ್ಯವಾಗಲಿವೆ,” ಎಂದು ಹೇಳಿದರು.

ವೈದ್ಯರನ್ನು ಭೇಟಿ ಮಾಡಲು ಇಚ್ಛಿಸುವ ಸಾರ್ವಜನಿಕರು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 9741032526 ಈ ಸಂಖ್ಯೆಗೆ ಕರೆ ಮಾಡಿ, ವೈದ್ಯರನ್ನು ಭೇಟಿಯಾಗುವ ಸಮಯವನ್ನು ಕಾಯ್ದಿರಿಸಬಹುದು.

ಮಣಿಪಾಲ್ ಹಾಸ್ಪಿಟಲ್ಸ್ ಕುರಿತು:

ಆರೋಗ್ಯ ಕಾಳಜಿ ಕ್ಷೇತ್ರದಲ್ಲಿ ಮುಂಚುಣಿಯಲ್ಲಿರುವ ಮಣಿಪಾಲ್ ಹಾಸ್ಪಿಟಲ್ಸ್, ವಾರ್ಷಿಕ ಸುಮಾರು 3 ಮಿಲಿಯನ್ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುವ ಮುಲಕ ಭಾರತದ ಅಗ್ರ ಕ್ರಮಾಂಕದ 5 ಆರೋಗ್ಯ ಕಾಳಜಿ ಪ್ರದಾಯಕರಲ್ಲಿ ಒಂದೆನಿಸಿಕೊಂಡಿದೆ. ತನ್ನ ಮಲ್ಟಿಸ್ಪೆಷಾಲಿಟಿ ಹಾಗೂ ತೃತೀಯ ಆರೈಕೆ ವಿತರಣಾ ಜಾಲದ ಮೂಲಕ ಅತ್ಯುನ್ನತ ಗುಣಮಟ್ಟದ ಆರೋಗ್ಯ ಕಾಳಜಿ ಒದಗಿಸುವುದು ಹಾಗೂ ಆಸ್ಪತ್ರೆ ಕಾಳಜಿಯಿಂದ ಆಚೆಗೆ ತನ್ನ ಸೇವೆಗಳನ್ನು ವಿಸ್ತರಿಸುವ ಗುರಿಯನ್ನು ಮಣಿಪಾಲ್ ಹಾಸ್ಪಿಟಲ್ಸ್ ಹೊಂದಿದೆ. ಭಾರತ ಮತ್ತು ವಿದೇಶಗಳಲ್ಲಿ ಒಟ್ಟು 11 ತೃತೀಯ\ಕ್ವಾರ್ಟೆನೆರಿ ಕಾಳಜಿ ಸೌಲಭ್ಯಗಳು ಮತ್ತು 4 ಪೂರಕ ಕಾಳಜಿ (ಸೆಕೆಂಡರಿ ಕೇರ್) ಆಸ್ಪತ್ರೆಗಳನ್ನು ಹೊಂದಿರುವ ಮಣಿಪಾಲ್ ಹಾಸ್ಪಿಟಲ್ಸ್, ಇಂದು 15 ಆಸ್ಪತ್ರೆಗಳಾದ್ಯಂತ 6,000 ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಜಗತ್ತಿನಾದ್ಯಂತ ಇರುವ ವಿವಿಧ ರೀತಿಯ ರೋಗಿಗಳಿಗೆ ಸಮಗ್ರ ರೋಗ ನಿವಾರಕ ಮತ್ತು ರೋಗ ತಡೆಗಟ್ಟುವ ಸೇವೆಗಳನ್ನು ಮಣಿಪಾಲ್ ಹಾಸ್ಪಿಟಲ್ಸ್ ಒದಗಿಸುತ್ತಿದೆ. ಮಣಿಪಾಲ್ ಹಾಸ್ಪಿಟಲ್ಸ್ ಎನ್‍ಎಬಿಹೆಚ್, ಎಎಹೆಚ್‍ಆರ್‍ಪಿಪಿ ಮಾನ್ಯತೆ ಪಡೆದಿದೆ ಮತ್ತು ಇದರ ವ್ಯಾಪ್ತಿಯಲ್ಲಿರುವ ಬಹುತೇಕ ಆಸ್ಪತ್ರೆಗಳು ಎನ್‍ಎಬಿಎಲ್, ಇಆರ್, ರಕ್ತ ನಇಧಿ ಮಾನ್ಯತೆ ಪಡೆದಿವೆಯಲ್ಲದೆ, ಶ್ರೇಷ್ಠ ಮಟ್ಟದ ಶುಶ್ರೂಷಣೆಯಿಂದಾಗಿ ಜಗತ್ತಿನಾದ್ಯಂತ ಗುರುತಿಸಲ್ಪಡುತ್ತವೆ. ಇದರೊಂದಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆ ಎಂದೆನಿಸಿರುವ ಮಣಿಪಾಲ್ ಹಾಸ್ಪಿಟಲ್ಸ್, ರೋಗಿಗಳು ಇತರರಿಗೆ ಹೆಚ್ಚಾಗಿ ಶಿಫಾರಸು ಮಾಡುವ ಆಸ್ಪತ್ರೆಯಾಗಿದೆ ಎಂಬುದನ್ನು ವಿವಿಧ ಸಮೀಕ್ಷೆಗಳು ದೃಢಪಡಿಸಿವೆ.

ಇತ್ತೀಚಿನ ಸುದ್ದಿ

ಜಾಹೀರಾತು