ಇತ್ತೀಚಿನ ಸುದ್ದಿ
ಹರ್ ಘರ್ ತಿರಂಗ ಅಭಿಯಾನ: ಮರೋಳಿ ವಾರ್ಡಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ
11/08/2022, 21:21

ಮಂಗಳೂರು(reporterkarnataka.com):ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಮರೋಳಿ ವಾರ್ಡಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಲಕ್ಷಾಂತರ ಹೋರಾಟಗಾರರನ್ನು ನೆನಪಿಸುವ ಮೂಲಕ ಅಮೃತ ಮಹೋತ್ಸವದ ಸಂಭ್ರಮಾಚರಿಸಲು ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನಕ್ಕೆ ಕರೆ ನೀಡಿದ್ದಾರೆ. ನಮ್ಮ ಕ್ಷೇತ್ರದ ಪ್ರತಿ ಮನೆಯಲ್ಲೂ ತಿರಂಗ ಹಾರಿಸಲು ಮನೆ ಮನೆಗೆ ತೆರಳಿ ಪ್ರೇರೇಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿನೋದ್ ಮೆಂಡನ್, ಜಗದೀಶ್ ಶೆಣೈ, ಜನಾರ್ದನ ದೇವಾಡಿಗ, ಪ್ರಶಾಂತ್ ಮರೋಳಿ, ಕಿರಣ್ ದೇವಾಡಿಗ, ಜಗನ್ನಾಥ ದೊಡ್ಡಮನೆ, ಸರಳ ಕುಲಾಲ್, ಮಾಲತಿ ಅರುಣ್ ಶೆಟ್ಟಿ, ಗ್ರಾಮ ಸಮಿತಿ ಅಧ್ಯಕ್ಷರಾದ ಹರಿಣಾಕ್ಷ ಭಂಡಾರಿ, ತೇಜಾಕ್ಷ ಸುವರ್ಣ ನಟ್ಟಿಮನೆ, ವಾಸುದೇವ ದೇವಾಡಿಗ ಹಾಗೂ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.