ಇತ್ತೀಚಿನ ಸುದ್ದಿ
ಹಲ್ಯಾಳ: 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಮಹೋತ್ಸವದ ಸಂಭ್ರಮ
02/11/2023, 11:13

ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ
ಶ್ರೀ ಗುರು ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಮ್ ಡಿ ಪಾಟೀಲ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಯಲ್ಲಾಲಿಂಗ ಮುರಿಗೆಪ್ಪ ಗೌಡ ಪಾಟೀಲ್ ಅವರು ವಹಿಸಿದ್ದರು. ಎಸ್. ಕೆ. ಹಳಿಂಗಳಿ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ. ಆರ್. ಗುಮಚಿ ಕನ್ನಡ ರಾಜ್ಯೋತ್ಸವದ ಬಗ್ಗೆ ಕರ್ನಾಟಕದ ಇತಿಹಾಸದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅನಿಲ್ ಕುರೆಣ್ಣವರ, ಶುಭಂ ಬೊಮ್ಮಣ್ಣವರ್, ಮುರುಗೇಶ್ ಬಿರಾದರ್, ಸುರೇಶ್ ರೋಗಿ, ಎ ಆರ್ ಬಂಡಾರೆ, ಯುಕೆ ಲಕ್ಕುಂಡಿ, ಸ್ವಾತಿ ಬಾಗಿ, ಸಂಗೀತಾ ಪಾಟೀಲ್, ಅಶ್ವಿನಿ ಅವಟಿ , ಗೀತಾ ಅಂಬಿ ಹಾಗೂ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ನಂತರ ಗ್ರಾಮದಲ್ಲಿ ಪ್ರಭಾತ ಪೇರಿ ಮಾಡಲಾಯಿತು.
ವಿನಾಯಕ ಆಸಂಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿಗಳನಾಡಿ ವಂದಿಸಿದರು.