1:10 PM Monday21 - July 2025
ಬ್ರೇಕಿಂಗ್ ನ್ಯೂಸ್
Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ… ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14… ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ… ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ…

ಇತ್ತೀಚಿನ ಸುದ್ದಿ

ಹ್ಯಾಳ್ಯಾ: ದಲಿತ ಕುಟುಂಬಗಳಿಗೆ 4 ದಶಕಗಳಿಂದ ರಸ್ತೆ- ವಿದ್ಯುತ್ ನೀಡದ ಆಡಳಿತ; ಶಾಸಕರು, ಸಂಸದರೇ ಏನು ಮಾಡುತ್ತಿದ್ದೀರಿ?

26/01/2023, 20:04

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka agnail.ಕಾಂ

ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಮೋತಿಕಲ್ ತಾಂಡದ ಹತ್ತಿರದಲ್ಲಿ, ದಲಿತ ಸಮುದಾಯದ ರೈತರು ತಮ್ಮ ತಮ್ಮ ಹೊಲದಲ್ಲಿ ಕಳೆದ 40 ವರ್ಷಗಳಿಂದ ವಾಸವಿದ್ದಾರೆ. ಆದರೆ ಈ ಕುಟುಂಬಗಳು ಇಂದಿಗೂ ಮೂಲಭೂತ ಸೌಕರ್ಯಗಳನ್ನು ಕಂಡಿಲ್ಲ.ಇಲ್ಲಿಂದ ಆರಿಸಿ ಬಂದ ಶಾಸಕರು, ಸಂಸದರು ಏನು ಮಾಡುತ್ತಿದ್ದಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಡಾ .ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನದ ರಚನೆಯ ಸದುದ್ದೇಶ ಪರಿಪೂರ್ಣ ಸಕಾರಗೊಂಡಿಲ್ಲ ಎನ್ನುವುದು ಇಲ್ಲಿ ಸಾಬೀತಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರು ವಿದ್ಯಾರ್ಥಿ ಜೀವನದಲ್ಲಿದ್ದಾಗ, ಅವರು ಅನುಭವಿಸಿದ ಕಷ್ಟ ಕೋಟೆಲೆಗಳ ಸರಮಾಲೆಗಳನ್ನು ನೆನಪಿಸುವಂತಹ ದೃಶ್ಯಗಳು, ಕೆಲವೆಡೆಗಳಲ್ಲಿ ಇಂದಿಗೂ ದಲಿತರು ಅನುಭವಿಸುತ್ತಿದ್ದಾರೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಇಲ್ಲಿದೆ. ಇಲ್ಲಿ ವಾಸವಿರುವ ದಲಿತ ವಿದ್ಯಾರ್ಥಿಗಳು, ಈ ನಾಲ್ಕು ದಶಕಗಳಿಂದಲೂ ಏಣ್ಣೆ ದೀಪದಡಿ ವಿದ್ಯಾಭಾಸ ಮಾಡುತ್ತಿದ್ದಾರೆ. ದೀಪಡಿ ಓದಿ ಓರ್ವ ಈಗಾಗಲೇ ಪದವೀಧರನಾಗಿದ್ದಾನೆ, ಇನ್ನುಳಿದವರಲ್ಲಿ ಬಹುತೇಕ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆ, ಕೆಲವರು ಪ್ರೌಢ ಶಾಲೆ,ಕಾಲೇಜು ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಡ ದಲಿತ ನಾಲ್ಕು ಕುಟುಂಬಗಳು ಅಕ್ಷರಶಃ, ಕಳೆದ ನಾಲ್ಕು ದಶಕಗಳಿಂದ ಕಾಡಗತ್ತಲಲ್ಲಿ ಹೊಲದಲ್ಲಿಯೇ ವಾಸ ಮಾಡುತ್ತಿದ್ದಾರೆ. ನಾಲ್ಕು ದಶಕಗಳಿಂದಲೂ ಸೌಲಭ್ಯಗಳಿಗಾಗಿ ನಿರಂತರವಾಗಿ, ಸ್ಥಳೀಯ ಆಡಳಿತ ಕಚೇರಿಗಳಿಗೆ ಅಲೆದಾಡಿದ್ದಾರೆ. ಆದ್ರೆ ಅವರಿಗೆ ಕೇವಲ ಭರವಸೆಗಳ ಮಹಾಪೂರವೇ ಹರಿದು ಬಂದಿದೆ, ಆಸರೆ ಮಾತ್ರ ಗಗನ ಕುಸುಮ. ಪರಿಣಾಮ ದಲಿತ ಕುಟುಂಬಗಳು ಕಾಡ್ಗತ್ತಲ್ಲಲ್ಲಿ ವಸವಾಸದಲ್ಲಿವೆ. ತಾವು ನಲವತ್ತು ವರ್ಷಗಳಿಂದಲೂ ವಾಸವಿದ್ದು, ಸರ್ಕಾರಿ ಸೌಲಭ್ಯ ಹೊಂದಲು ಅಗತ್ಯವಿರೋ ಎಲ್ಲಾ ಅರ್ಹತೆಗಳಿದ್ದು ದಾಖಲೆಗಳಿದ್ದರೂ ಸ್ಥಳೀಯ ಆಡಳಿತ ಆದ್ಯತೆ ನೀಡುತ್ತಿಲ್ಲ ಎನ್ನುತ್ತಾರೆ ಕುಟುಂಬ ಸದಸ್ಯರು. ಸಾಕಷ್ಟು ಬಾರಿ ವಿದ್ಯುತ್ ಸೌಕರ್ಯಕ್ಕಾಗಿ ಜೆಸ್ಕಾಂ ಇಲಾಖೆಯ ಮೊರೆ ಹೋಗಿದ್ದು, ಅವರು ಸ್ಥಳಪರಿಶೀಲಸಿ ಸೌಕರ್ಯ ಕಲ್ಪಿಸುವುದಾಗಿ ಹಲವು ವರ್ಷಗಳಿಂದ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಈ ವರೆಗೂ ಕಾರ್ಯರೂಪ ಕಂಡಿಲ್ಲ ದಿವ್ಯ ನಿರ್ಲಕ್ಷ್ಯ ವಸಹಿಸಿದ್ದಾರೆಂದು ಕುಟುಂಬಸ್ಥರು ಬೇಸರ ವ್ಯೆಕ್ತಪಡಸಿದ್ದಾರೆ.

ಪ್ರಭಾವಿ ಜನಪ್ರತಿಧಿಗಳೆಂದು, ತಮ್ಮನ್ನ ತಾವು ಬಿಂಬಿಸಿಕೊಂಡಿರುವವರು ಬಂದು ಪರಿಶೀಲಿಸಿದ್ದಾರೆ. ಜೊತೆಗೆ ಅನುಕಂಪ ವ್ಯೆಕ್ತಪಡಿಸಿದ್ದಾರೆ. ಜೊತೆ ಜೊತೆಗೆ ತಮ್ಮ ರೂಡಿ ಸಂಪ್ರದಾಯದಂತೆ ಭರಪೂರ ಭರವಸೆಗಳನ್ನ ನೀಡಿದ್ದಾರೆ ವಿನಃ, ಒಬ್ಬೇ ಒಬ್ಭ ಜನಪ್ರತಿನಿಧಿ ಪ್ರಾಮಾಣಿಕತೆಯ ಕಾಳಜಿ ತೋರಿಲ್ಲ ಎಂದು ತಮ್ಮ ಅಳನ್ನು ತೋಡಿಕೊಂಡಿದ್ದಾರೆ ದಲಿತ ಕುಟುಂಬಗಳ ಸದಸ್ಯೆರು. ತಮ್ಮ ಭವಿಷ್ಯದ ಬಗ್ಗೆ ಚಿಂತೆ ಇಲ್ಲ ದೇವರಿದ್ದಾನೆ ಕಾಯುತ್ತಾನೆ, ಆದ್ರೆ ನಮ್ಮನ್ನ ನಂಬಿರುವ ಮಕ್ಕಳ ಭವಿಷ್ಯಕ್ಕಾಗಿ ತಾವು ವಿದ್ಯುತ್ ಹಾಗೂ ರಸ್ತೆ ಸೌಕರ್ಯಕ್ಕಾಗಿ ಹೋರಾಟ ನಡೆಸುವುದಾಗಿ ದಲಿತ ಕುಟುಂಬಗಳು ತಿಳಿಸಿವೆ.

ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ ಹಾಗೂ ರಸ್ತೆ ನಿರ್ಮ‍ಾಣ ಮಾಡಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಡಾ ಬಿ.ಆರ್. ಆಂಬೇಡ್ಕರವರ ಭಾವಚಿತ್ರದೊಂದಿಗೆ ಹೋರಾಟ ಮಾಡಲ‍ಾಗುವುದು. ತಾಲೂಕಾಡಳಿತದ ಮುಂದೆ ನಾಲ್ಕು ಕುಟುಬದವರೆಲ್ಲರೂ ಅನಿರ್ಧಿಷ್ಠಾವಧಿಕಾಲ ಧರಣಿ ಮಾಡುವುದು, ಸೌಕರ್ಯಕ್ಕಾಗಿ ಕ‍ನೂನು ರೀತ್ಯ ಹೋರಾಟ ತಮಗೆ ಅನಿವಾರ್ಯ ಎನ್ನುತ್ತಾರೆ ದಲಿತ ಮುಖಂಡರು. ಕತ್ತಲ್ಲಲ್ಲಿರುವ ತಮ್ಮ ಕುಟುಂಬಗಳಲ್ಲಿರುವ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ, ಕತ್ತಲಾಗುವ ಭೀತಿ ಬೆಂಬಿಡದೇ ಕಾಡುತ್ತಿದೆ ಕಾರಣ ಶೀಘ್ರವೇ, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದ‍ಾಗಿ ಸ್ಪಂದಿಸಬೇಕಿದೆ, ಅಗತ್ಯ ಮೂಲಭುತ ಸೌಲಭ್ಯಗಳನ್ನು ತಮಗೆ ಕಲ್ಪಿಸಬೇಕೆಂದು ದಲಿತ ಕುಟುಂಬ ಪ್ರಮುಖರಾದ ಶಿವಪ್ಪಜ್ಜ, ಕೊಟ್ರಮ್ಮ, ಗೋಣೆಪ್ಪ, ಮಾರುತೆಪ್ಪ ಹಾಗೂ ಕುಟುಂಬಗಳ ಸದಸ್ಯರು. ಈ ಮೂಲಕ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ. ಗ್ರಾಮದಿಂದ ಅನತಿ ಅಂತರದಲ್ಲಿರುವ ತಾವು ಅಗತ್ಯ ಬಿದ್ದಾಗ ಗ್ರಾಮಕ್ಕೆ ತೆರಳಲು, ರಸ್ತೆ ಇಲ್ಲವಾಗಿದೆ ಹಾಗೂ ರಾತ್ರಿ ವಿದ್ಯುತ್ ಬೆಳಕಿನ ವ್ಯವಸ್ಥೆ ಅತ್ಯವಶ್ಯಕವಾಗಿದೆ. ಮೂಲಭೂತವಾಗಿ ಬೇಕಾಗಿರುವ ದಾರಿ ಹಾಗೂ ವಿದ್ಯುತ್ ವ್ಯವಸ್ಥೆ ಇಲ್ಲದೆ, ನಿತ್ಯ ನರಳುತ್ತಿರುವ ನಾಲ್ಕು ಕುಟುಂಬಗಳ ನರಳಾಟವನ್ನು ಕುಟುಂಬದ ಹಿರಿಯ ತೋಟದ ಶಿವಜ್ಜ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದನ್ನು ಕೇಳಿದರೆ ಎಂಥವರಿಗೂ ಕರಳು ಚುರ್ ಅನ್ನದಿರದು, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರ ಗಮನಕ್ಕೆ ತರಬೇಕಾಗಿದೆ. ಕ್ಷೇತ್ರದ ಶಾಸಕರಾದ ಭೀಮಾನಾಯ್ಕರವರು ನಮಗೆ, ವಾಸ್ತವ ತಿಳದು ವಿದ್ಯುತ್ ಹಾಗೂ ದಾರಿ ಭಾಗ್ಯ ನೀಡಬೇಕಿದೆ ಅಂದಾಗ ಮಾತ್ರ , ನಮ್ಮ ಹಾಗೂ ನಮ್ಮ ಮಕ್ಕಳ ಭವಿಷ್ಯ ಬೆಳಕು ಕಾಣಲು ಸಾಧ್ಯ ಎನ್ನುತ್ತಾರೆ ಶಿವಜ್ಜ. ಸಂಬಂಧಿಸಿದಂತೆ ಪ್ರಭಾವಿ ಜನಪ್ರತಿನಿಧಿ ಸೇರಿದಂತೆ ವಿವಿದ ಜನ ಪ್ರತಿನಿಧಿಗಳಿಗೆ, ಇಲಾಖೆಗಳ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾಗಿದೆ. ಅವರು ಮನಸ್ಸನ್ನು ಮಾಡದಿರೋದೇ ನಮ್ಮ ದುರ್ಧೈವ ಸಂಗತಿ, ಈ ಮೂಲಕ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಡಾ ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನದ ಮೂಲ ಉದ್ದೇಶಕ್ಕೆ ದಕ್ಕೆ ತರಲಾಗಿದೆ ಎಂದು ಶಿವಜ್ಜ ನೊಂದು ನುಡಿದು ತಮ್ಮ ಕಣ್ಣಂಚಲ್ಲಿ ನೀರಿಡುತ್ತಾರೆ. ಪ್ರಮುಖ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ, ಹಾಗೂ ವಿದ್ಯುತ್ ಸೇರಿದಂತೆ, ವಾಸಿಸಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದು ನಾಲ್ಕು ದಲಿತ ಕುಟುಂಬ ಕೋರಿದ್ದು ಸ್ಪಂದನೆ ಸಿಕ್ಕಿಲ್ಲ. ಯಾವುದೇ ಜನಪ್ರತಿನಿಧಿಗಳು ಆಲಿಸುತ್ತಿಲ್ಲ, ಯಾವ ಅಧಿಕಾರಿಯೂ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸ್ಪಂಧಿಸಿಲ್ಲ ಎಂದು ಕುಟುಂಬದ ಸರ್ವ ಸದಸ್ಯರು ದೂರಿದ್ದಾರೆ. ಇದು ಇಪ್ಪತ್ತೈದು ವಿದ್ಯಾರ್ಥಿಗಳ ಭವಿಷ್ಯದ ಪ್ರೆಶ್ನೆಯಾಗಿದ್ದು, ನಾಲ್ಕು ಕುಟುಂಬಗಳ ಒಟ್ಟು ಇಪ್ಪತ್ತೈದು ವಿದ್ಯಾರ್ಥಿಗಳು ನಿತ್ಯ ಶಾಲಾ ಕಾಲೇಜಿಗೆ ತೆರಳುತ್ತಿದ್ದಾರೆ. ಮನೆಯಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯುತ್ ಅನಿವಾರ್ಯವಾಗಿದೆ, ಆದರೆ ಅವರು ನಿತ್ಯ ದೀಪದಡಿ ಬೆಳಕಿನಲ್ಲಿ ವಿದ್ಯಾಭ್ಯಾಸ ನಡೆಸುವ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ರವರು ವ್ಯಾಸಂಗ ಮಾಡಿದಂತ ದುರಾವಸ್ಥೆಯ ಸನ್ನಿವೇಶ ಎದುರಿಸುತ್ತಿದ್ದಾರೆ. ವಿದ್ಯುತ್ ಬೆಳಕಿಲ್ಲದೆ ನಿತ್ಯವೂ ಕತ್ತಲಲ್ಲಿದ್ದು, ಎಣ್ಣೆ ದೀಪದಲ್ಲಿ ವ್ಯಾಸಾಂಗ ಮಾಡೋ ಮೂಲಕ ಏನೂ ಕಾಣದ ಕಾಡಗತ್ತಲಲ್ಲಿ ತಮ್ಮ ಭವಿಷ್ಯ ಕಂಡು ಕೊಳ್ಳೋ ಸಾಹಸ ನಿತ್ಯ ಮಾಡುತ್ತಿದ್ದಾರೆ ವಿದ್ಯಾರ್ಥಿಗಳು. ಗ್ರಾಮಕ್ಕೆ ತರೆಳುವ ಮುಖ್ಯ ದಾರಿಯಿಂದ ಮನೆಗಳಿಗೆ ರಸ್ತೆ ಮಾರ್ಗ ಕಲ್ಪಿಸುವುದು ಅನಿವಾರ್ಯವಾಗಿದೆ, ಈಗಿರುವ ಕಾಲುದಾರಿ ಸಂಪೂರ್ಣ ತೆಗ್ಗು ಗುಂಡಿಗಳು ತುಂಬಿವೆ. ತುಂಬಾ ತಗ್ಗು ಗುಂಡಿಗಳಿಂದ ಇರುವುದರಿಂದ ಸಂಚಾರಕ್ಕಾ ನಿತ್ಯ ಸರ್ಕಸ್ ಮಾಡಬೇಕಿದೆ, ದಾರಿಯಲ್ಲಿ ಬೈಕ್ ಲ್ಲಿ ತೆರಳುವಾಗ ಮಾತ್ರವಲ್ಲ, ಪಾದಾಚಾರಿಯಾಗಿ ತೆರಳುವಾಗಲೂ ಸಹ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಲದಲ್ಲಿನ ವನವಾಸದಿಂದಾಗಿ ಕಾಡ್ಗತ್ತಲಲ್ಲಿ ಬರುವ ವಿಷಜಂತುಗಳೊಂದಿಗೆ ನಿತ್ಯ ಸೆಣಸಾಟ, ವನ್ಯ ಮೃಗಗಳೊಂದಿಗೆ ನಿತ್ಯವೂ ಹೋರಾಟ ತಪ್ಪಿದ್ದಲ್ಲ ಎನ್ನುತ್ತಾರೆ ದಲಿತ ಕುಟುಂಬಗಳ ಹಿರಿಯರು.ಬೆಂಕಿಯ ಬೆಳಕೇ ಜೀವನದುತ್ಸಹ ತುಂಬಿದೆ, ನಿತ್ಯ ಚೇತನ ನೀಡುತ್ತಿದೆ. ವಿದ್ಯಾರ್ಥಿಗಳ ಪಾಲಿಗೆ ಎಣ್ಣೆ ದೀಪವೇ ಜೀವನ ದಾರಿದೀಪವಾಗಿದೆ,ಎನ್ನುತ್ತಾರೆ ಆಧ್ಯಾತ್ಮ ಚಿಂತಕರು, ನಾಟಿವೈದ್ಯರು ಹಾಗೂ ದಲಿತ ಕುಟುಂಬಗಳಿಗೆ ಸೇರೇದವರಲ್ಲಿ ಹಿರಿಯರಾಗಿರುವ ಶಿವಜ್ಜ. ಮಳೆಗಾಲದಲ್ಲಿ ಸೃಷ್ಟಿಯಾದ ಅವಾಂತರದಿಂದಾಗಿ, ಅನೇಕ ದಿನಗಳು ಶಾಲೆ ಕಾಲೇಜ್ ಗಳಿಗೂ ಹಾಜರಾಗದಂತ ದುಸ್ಥಿತಿ ಎದುರಿಸಿದ್ದಾರೆ.


ಜಿಲ್ಲಾಧಿಕಾರಿಗಳು ಈ ದುರಾವಸ್ಥೆಯನ್ನು ಮನವರಿಕೆ ಮಾಡಿಕೊಂಡು ಕೂಡಲೇ ಸ್ಪಂಧಿಸಬೇಕಿದೆ. ವಾಸವಿರುವ ನಾಲ್ಕು ದಲಿತ ಕುಟುಂಬಗಳಲ್ಲಿ ಮಹಿಳೆಯರು, ವೃದ್ಧರು,ಮಕ್ಕಳು ಸೇರಿದಂತೆ ಇಪ್ಪತ್ತೈದು ವಿದ್ಯಾರ್ಥಿಗಳು ಇದ್ದಾರೆ. ಅವರೆಲ್ಲರ ಕ್ಷೇಮಕ್ಕಾಗಿ ಜನಪ್ರತಿನಿಧಿಗಳು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿದೆ. ತಮ್ಮ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಾಲ್ಕು ದಲಿತ ಕುಟುಂಬಗಳ ಸದಸ್ಯರು, ಈ ಮೂಲಕ ರಾಜ್ಯ ಮುಖ್ಯಮಂತ್ರಿಗಳಲ್ಲಿ ಈ ಮೂಲಕ ತಮ್ಮ ಮನವಿ ಮಾಡಿದ್ದಾರೆ.

ನಾಲ್ಕು ದಲಿತ ಕುಟುಂಬಗಳು ನಾಲ್ಕು ದಶಕಗಳಿಂದಲೂ ಆಕ್ಷರಸಃ ವನವಾಸದಲ್ಲಿದ್ದು, ಚಿರತೆ ಕರಡಿ ಕಾಡುಹಂದಿಗಳ ಹಾವಳಿ ಹಾಗೂ ಭಾರೀ ವಿಷಜಂತುಗಳೊಡನೆ ನಿತ್ಯ ಜೀವನ. ನಾಡಿನ ಸಂಪರ್ಕ ಕಾಣದೆ. ನಾಗರೀಕರಾಗಿದ್ದರೂ ಕೂಡ ವನ ವಾಸ ತಪ್ಪಿಲ್ಲ, ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲ. ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಬಸವರಾಜ, ಹಾಗೂ ಸಂಘಟನೆ ಪದಾಧಿಕಾರಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಹಾಗೂ ಪತ್ರಕರ್ತ ಮೀನಕೇರಿ ತಿಪ್ಪೇಸ್ವಾಮಿ,ಮಾದಿಗ ಮೀಸಲಾತಿ ಹೋರಾಟದ ಸಮಿತಿ ಮುಖಂಡ ಹಾಗೂ ಪತ್ರಕರ್ತ ಸಾಲುಮನಿ ರಾಘವೇಂದ್ರ, ದಲಿತ ಮುಖಂಡ ಉಪ್ಪಾರಗಟ್ಟೆ ಬುಳ್ಳಪ್ಪ ಮಾತನಾಡಿ, ತಾಲೂಕಾಡಳಿತ ಜಿಲ್ಲಾಡಳಿತ ಶೀಘ್ರವೇ ಸ್ಥಳಕ್ಕೆ ಬೆಟ್ಟಿನೀಡಿ, ಸೌಲಭ್ಯವಂಚಿತ ನಾಲ್ಕು ದಲಿತ ಕುಂಟುಂಬಗಳಿಗೆ ಅಗತ್ಯ ಸೌಲಭ್ಯಗಳನ್ನು ಶೀಘ್ರವೇ ಒದಗಿಸುವಂತೆ ಈ ಮೂಲಕ ಒತ್ತಾಯಿಸಿದ್ದಾರೆ. ಇದರಲ್ಲಿ ದಲಿತ ಮುಖಂಡರು, ವಂದೇ ಮಾತರಂ ಜಾಗೃತಿ ವೇದಿಕೆ ಪದಾಧಿಕಾರಿಗಳು.ದಲಿತ ಪರ ಸಂಘಟನೆಗಳು ಸೇರಿದಂತೆ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು