1:45 AM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಹಲವು ಎಡವಟ್ಟುಗಳ ನಡುವೆ ಸ್ವಾತಂತ್ರ್ಯೋತ್ಸವ: ಬಿಸಿಲಿನ ತಾಪಕ್ಕೆ ಧ್ವಜಾರೋಹಣ ವೇಳೆ ಕುಸಿದು ಬಿದ್ದ ಮಕ್ಕಳು !

15/08/2024, 20:03

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

78ನೇ ವರ್ಷದ ಸ್ವಾತಂತ್ರ್ಯ ದಿನದ ಧ್ವಜಾರೋಹಣ ವೇಳೆ ವಿಪರೀತ ಬಿಸಿಲಿನ ತಾಪಕ್ಕೆ ಶಾಲಾ ಮಕ್ಕಳು ನಿತ್ರಾಣವಾಗಿ ಕುಸಿದುಬಿದ್ದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ತಾಲೂಕು ದಂಡಾಧಿಕಾರಿಗಳ ಭಾಷಣದ ನಂತರದಲ್ಲಿ ಮಕ್ಕಳು ಕುಸಿದು ಬಿದ್ದಿದ್ದಾರೆ. ತಹಸೀಲ್ದಾರ್ ಜಕ್ಕಣ್ಣ ಗೌಡರ್ ಅವರು ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ ಮಾಡಿ ಮುಗಿಸಿದ್ದರು. ಇದಕ್ಕೂ ಮೊದಲು ಧ್ವಜಾರೋಹಣ ನಂತರ ಮಕ್ಕಳ ಪಥಸಂಚಲನ ಹೀಗೆ ತುಂಬ ಹೊತ್ತು ಬಿಸಿಲಿನಲ್ಲೇ ನಿಂತಿದ್ದ ಮಕ್ಕಳು ಸುಸ್ತಾಗಿ ಕುಸಿದು ಬಿದ್ದಿದ್ದಾರೆ.

ಬಿಸಿಲಿನ ತಾಪಕ್ಕೆ ಕುವೆಂಪು ಶಾಲೆಯ ವಿದ್ಯಾರ್ಥಿಯೊರ್ವ ಕುಸಿದು ಬಿದ್ದು ಮೂಗಿನಲ್ಲಿ ರಕ್ತಸ್ತ್ರಾವವಾಗಲು ಆರಂಭವಾಗಿತ್ತು. ನಂತರ ಸ್ಥಳದಲ್ಲಿಯೇ ಇದ್ದಂತಹ ತಹಸೀಲ್ದಾರ್ ಅವರ ವಾಹನದಲ್ಲಿಯೇ ಆಸ್ಪತ್ರೆಗೆ ಕರೆದೋಯ್ದು ನಂತರ ವಿದ್ಯಾರ್ಥಿ ಮನೆಗೆ ಬಿಡಲಾಯಿತು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕುವೆಂಪು ಶಾಲೆಗೆ ಸಂಬಂಧಪಟ್ಟ ಶಿಕ್ಷಕ ರೊಬ್ಬರು ನಿಮಗೆ ಈ ಹುಡುಗನನ್ನು ಕರೆದುಕೊಂಡು ಹೋಗಲು ಹೇಳಿದ್ಯಾರು? ಎಂದು ಶಿಕ್ಷಕರು ಕಂದಾಯ ಇಲಾಖೆ ಅಧಿಕಾರಿಯೊಬ್ಬರಿಗೆ ಏರು ದ್ವನಿಯಲ್ಲಿ ಗದರಿಸಿ ಕೇಳಿದ್ದು ಕುವೆಂಪು ಶಾಲೆಯ ಶಿಕ್ಷಕರ ನಡೆಗೆ ತಾಲೂಕು ಕಚೇರಿಯ ವಾಹನ ಚಾಲಕರು ಸೇರಿದಂತೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇತ್ತ ಕುಸಿದು ಬಿದ್ದ ವಿದ್ಯಾರ್ಥಿ ಮೂಗಿನಲ್ಲಿ ರಕ್ತಸ್ತ್ರಾವವಾಗುವ ವಿಷಯ ತಿಳಿಯುತ್ತಿದ್ದಂತೆ
ತಹಸೀಲ್ದಾರ್ ವಾಹನ ಚಾಲಕರಾದ ಕಿರಣ್ ಕುಳಗೇರಿ ಮತ್ತು ರಾಘವೇಂದ್ರ ಹೊರಬೈಲು ಇಬ್ಬರು ಸೇರಿ ತಡ ಮಾಡದೇ ತಹಸೀಲ್ದಾರ್ ವಾಹನದಲ್ಲೇ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೋಯ್ದರು.
*ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಲವೊಂದು ಎಡವಟ್ಟುಗಳು!:*
ಇನ್ನೂ ಉಳಿದಂತೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಧ್ವಜಾರೋಹಣ ಹಬ್ಬದ ವಾತಾವರಣ ಆದರೂ ವೇದಿಕೆಗೆ ಶಾಮೀಯಾನ ಕೂಡ ಹಾಕದಿರುವುದು ಕಂಡು ಬಂದಿತು. ಧ್ವಜಾರೋಹಣ ಕಟ್ಟೆಗೆ ಸುಣ್ಣ ಬಣ್ಣ ಕಾಣದಿದ್ದರೂ ಕೂಡ ಮಳೆಯಲ್ಲಿ ಪಾಚಿ ಕಟ್ಟಿದ ಸ್ಥಿತಿಯಲ್ಲಿ ಇದ್ದು ಕೊನೆ ಪಕ್ಷ ಧ್ವಜದ ಕಟ್ಟೆಯನ್ನಾದರು ತಿಕ್ಕಿ ತೊಳೆಯಬಹುದಿತ್ತಲ್ವೇ? ಎಂದು ಸ್ಥಳದಲ್ಲಿ ಹಾಜರಿದ್ದ ಆನೇಕ ಸಾರ್ವಜನಿಕರಿಂದ ಮಾತು ಕೇಳಿ ಬರುತ್ತಿತ್ತು.
ಧ್ವಜಾರೋಹಣ ನೆರವೇರಿಸಿ ನಂತರದ ಸಭಾ ಕಾರ್ಯಕ್ರಮ ಯು. ಆರ್. ಅನಂತಮೂರ್ತಿ ಪ್ರೌಢಶಾಲೆಯ ಒಳಗಿರುವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ವೇದಿಕೆ ಕಾರ್ಯಕ್ರಮ ಯು.ಆರ್. ಅನಂತಮೂರ್ತಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಬದಲಾವಣೆ ಅಗಿದ್ದರಿಂದ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಸರಿ ಇಲ್ಲದೆ ಇರುವುದು ಗಮನಿಸಿ ತುಂಗಾ ನದಿ ಪಕ್ಕದಲ್ಲಿ ಇದ್ದು ನೀರಿಗೂ ಬರ ಬಂತೇ ಎಂದು ಶಾಲಾ ಮಕ್ಕಳಿಂದ ಹಿಡಿದು ಫೊಷಕರು ಸೇರಿದಂತೆ ಅನೇಕ ಗಣ್ಯರು ಕೂಡ ಕಾರ್ಯಕ್ರಮ ಆಯೋಜಕರಿಗೆ ಹಿಡಿ ಶಾಪ ಹಾಕುತ್ತ ಧ್ವಜದ ಕಂಬಕ್ಕೆ ಸ್ವಾತಂತ್ರ್ಯ ಸಿಕ್ಕರೂ ಧ್ವಜದ ಕಟ್ಟೆಗೆ ಸ್ವಾತಂತ್ರ್ಯ ಸಿಗಲಿಲ್ವಾ ಎಂದು ಸ್ಥಳದಲ್ಲಿ ಇದ್ದ ಸಾರ್ವಜನಿಕರು ಮಾತನಾಡುತ್ತಾ ಇರುವುದು ಕಂಡು ಬಂತು.

ಇತ್ತೀಚಿನ ಸುದ್ದಿ

ಜಾಹೀರಾತು