8:44 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಹಲವು ಜೀವ ಬಲಿಗೆ ಕಾರಣವಾದ ಕೊಟ್ಟಿಗೆಹಾರ ಬಳಿಯ ಅಪಘಾತ ವಲಯದ 2 ತಿರುವುಗಳನ್ನು ನೇರ ಮಾಡುವಂತೆ ಸಾರ್ವಜನಿಕರ ಆಗ್ರಹ

18/10/2023, 15:47

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟ್ ಗೆ ಹೋಗುವ ಅಜಾದ್ ನಗರದ ಕೊಗಳತೆಯ ಅಂತರದಲ್ಲಿ ಎರಡು ಅಪಘಾತ ಸಂಭವಿಸುವ ತಿರುವುಗಳಿದ್ದು ಅಲ್ಲಿ ಅನೇಕ ವಾಹನ ಅಪಘಾತಗಳು ನಡೆದಿದ್ದು ಹಲವರು ಗಾಯಗೊಂಡಿದ್ದಾರೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಚಾರ್ಮಾಡಿ ಘಾಟ್ ಭಾಗದಿಂದ ಕೊಟ್ಟಿಗೆಹಾರಕ್ಕೆ ಬರುವಾಗ ನೇರ ಇಳಿಜಾರು ರಸ್ತೆಯಿದ್ದು ಬರುವ ವಾಹನಗಳು ಹೋಟೆಲ್ ಬಳಿ ತಿರುವಿನಲ್ಲಿ ಮುಗ್ಗರಿಸಿ ಪಲ್ಟಿ ಹೊಡೆಯುತ್ತಿವೆ. ಇದರಿಂದ ಅನೇಕ ಪ್ರವಾಸಿಗರು ಅಪಘಾತಕ್ಕೀಡಾಗಿದ್ದಾರೆ. ಕೊಟ್ಟಿಗೆಹಾರದಿಂದ 50 ಮೀ ಅಂತರದ ಎರಡು ತಿರುವುಗಳು ಜನರ ಪಾಲಿನ ಮೃತ್ಯುಕೂಪಗಳಾಗಿವೆ. ಇತ್ತೀಚೆಗೆ ಗ್ಯಾಸ್ ಲಾರಿ ಹಾಗೂ ಎಳನೀರು ಲಾರಿ ಅಪಘಾತವಾಗಿತ್ತು. ಈ ಹಿಂದೆ ಹಲವು ದ್ವಿಚಕ್ರ ಸವಾರರು, ಹಲವು ಪ್ರವಾಸಿಗರು ಈ ನೇರ ರಸ್ತೆಯಲ್ಲಿ ವೇಗವಾಗಿ ಬಂದು ರಸ್ತೆಯ ಕೊನೆಯಲ್ಲಿ ಹಿಮ್ಮರಿ ತಿರುವು ತರಹ ತಿರುವು ಇರುವುದರಿಂದ ದರ್ಬಾರ್ ಹೋಟೆಲ್ ಬಳಿ ಹಾಗೂ ತರುವೆ ಗ್ರಾಮಕ್ಕೆ ತಿರುಗುವ ರಸ್ತೆ ಬಳಿ ತಿರುವುಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಿರುವುಗಳನ್ನು ನೇರ ಮಾಡಿ ಅಪಘಾತ ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ‘ಕೊಟ್ಟಿಗೆಹಾರದ ಬಳಿ ಎರಡು ಅಪಾಯದ ತಿರುವುಗಳಿದ್ದು ಅನೇಕ ಅಪಘಾತ ಸಂಭವಿಸಿವೆ. ಕೊಟ್ಟಿಗೆಹಾರ ತಲುಪುವ ಮುನ್ನವೇ ಜನರು ಪ್ರಾಣಾಪಾಯ ಸಂಭವಿಸುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಿರುವುಗಳ ಬಗ್ಗೆ ಸೂಕ್ತ ಗಮನ ಹರಿಸಬೇಕೆಂದು ಕೊಟ್ಟಿಗೆಹಾರ
ಸಮಾಜ ಸೇವಕ ಸಂಜಯ್ ಗೌಡ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು