ಇತ್ತೀಚಿನ ಸುದ್ದಿ
15 ದಿನಗಳು ಕಳೆದರೂ ಬಾರದ ಆಲೂಗಡ್ಡೆ ಬೆಳೆ: 10 ಎಕರೆ ಜಮೀನು ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ನೊಂದ ರೈತ
30/05/2023, 19:07
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
15 ದಿನವಾದರೂ ಆಲೂಗಡ್ಡೆ ಬೆಳೆ ಬಾರದ್ದ ಕಂಡು ಮನನೊಂದ ರೈತ ಅದರ ಮೇಲೆ ಟ್ರ್ಯಾಕ್ಟರ್ ಚಾಲನೆ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ನಡೆದಿದೆ.
ಆಲೂಗಡ್ಡೆ ಬೀಜ ನೆಲದಲ್ಲಿ ಕರಗಿರೋದ್ರಿಂದ ಮನನೊಂದ ರೈತ ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದರು. 5 ದಿನಕ್ಕೆ ಬೆಳೆಯುತ್ತೆ ಎಂದು ಹಾಸನದ ಆಲೂಗಡ್ಡೆ ಮಂಡಿಯಲ್ಲಿ ಕೊಟ್ಟ ಬೀಜವನ್ನು ರೈತ ಉತ್ತಿದ್ದರು. 60-70 ರೈತರು ಮೂರು ಲಾರಿಯಲ್ಲಿ ಆಲೂಗಡ್ಡೆ ಬೀಜ ತಂದಿದ್ದರು.
ಇದೀಗ ರೈತ 10 ಎಕರೆ ಜಮೀನಿನ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬೆಳೆ ಬಿತ್ತಿದ್ದರು. ಆಲೂಗಡ್ಡೆ ಮಂಡಿ ವಿರುದ್ಧ ರೈತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.