ಇತ್ತೀಚಿನ ಸುದ್ದಿ
ಹದಗೆಟ್ಟ ರಸ್ತೆ: ನಿದ್ರೆಗೆ ಜಾರಿದ ಪಿಡಬ್ಲ್ಯುಡಿ ಅಧಿಕಾರಿಗಳು; ಶಾಸಕರು ಏನು ಮಾಡುತ್ತಿದ್ದಾರೆ?
03/11/2022, 20:06

ರಾಹುಲ್ ಅಥಣಿ ಬೆಳಗಾವಿ
info.reporter Karnataka@gmail.com
ಅಥಣಿ ಪಟ್ಟಣದ ಹೊರವಲಯದ ಸುಮಾರು 5 ಕಿಲೋ ಮೀಟರ್ ರಸ್ತೆ ಹಾಳಾಗಿದ್ದು ದಿನಂಪ್ರತಿ ವಾಹನ ಸವಾರರು ಈ ರಸ್ತೆಯಲ್ಲಿ ಪ್ರಯಾಣಿಸಲು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ನಿರ್ಮಿಸಿ ಎಂದು ರಸ್ತೆಯಲ್ಲಿ ಗಿಡನೆಟ್ಟು ಕಾಂಗ್ರೇಸ್ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಅಥಣಿಯಿಂದ ಖಿಳೇಗಾವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಥಣಿ ಗ್ರಾಮೀಣ ಪ್ರದೇಶದಿಂದ ಅಬ್ಬಿಹಾಳವರೆಗೆ ಪೂರ್ಣ ಹದಗೆಟ್ಟಿದೆ. ಬೃಹದಾಕಾರದ ಹೊಂಡಗಳು ಬಿದ್ದಿವೆ. ಇದರಿಂದ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ಅಲ್ಲದೆ ರಸ್ತೆಯ ತುಂಬೆಲ್ಲ ಜಲ್ಲಿ ಕಲ್ಲುಗಳು ಬಿದ್ದಿವೆ, ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ಶಾಲಾ ಮಕ್ಕಳು, ರೈತರು ಮುಖ್ಯವಾಗಿ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.