3:54 PM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಹಾಕಿ ಗ್ರೌಂಡ್ ಗೆ ಕಾಂಕ್ರೀಟ್!: ಶಾಸಕರು, ಸಂಸದರು ಫ್ಲೈಟ್ ನಲ್ಲಿ ಹೋಗ್ತಾರೆ; ಮತ್ಯಾಕೆ ಬೇಕು ರೀ.. ಸರ್ವಿಸ್ ಬಸ್ ಸ್ಟಾಂಡ್?!!

11/04/2022, 13:09

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

‘ಛೀ…. ಏನ್ರೀ ಇದು ಬಸ್ ಸ್ಟಾಂಡ್?  ಗಬ್ಬು ವಾಸ್ನೆ…

ನಿಮ್ಮ ಶಾಸಕರು, ಸಂಸದರು ಏನು ಮಾಡುತ್ತಿದ್ದಾರೆ? ಅಲ್ಲಾ ರೀ…ಇಬ್ರು ಮುಖ್ಯಮಂತ್ರಿಗಳನ್ನು ಕೊಟ್ರೂ ಒಂದು ಬಸ್ ಸ್ಟಾಂಡ್ ಕಟ್ಟಿಸೋಕೆ ಆಗಿಲ್ವಾ?’

ಇದು ನೆರೆಯ ಹಾಸನ ಜಿಲ್ಲೆಯ ಶಂಕರಲಿಂಗೇಗೌಡ ಅವರ ನುಡಿ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯಿರುವ ಹಾಕಿ ಗ್ರೌಂಡ್ ನಲ್ಲಿ 3 ದಶಕಗಳಿಂದ ತಾತ್ಕಾಲಿಕ ನೆಲೆಯಲ್ಲಿ ಬೀಡು ಬಿಟ್ಟಿರುವ ಖಾಸಗಿ ಸರ್ವಿಸ್ ಬಸ್ ನಿಲ್ದಾಣದ ಬಗ್ಗೆ ಶಂಕರ ಲಿಂಗೇಗೌಡರು ಆಕ್ರೋಶದಿಂದ ಹೇಳಿದ ಮಾತು.

‘ನಮ್ಮೂರಿನ(ಹಾಸನ) ಬಸ್ ಸ್ಟಾಂಡ್ ನೋಡ್ರಿ… ಮಾಲ್ ..ಮಾಲ್ ತರಹ ಇದೆ. ಅಲ್ಲಾ ರೀ..


ವೀರಪ್ಪ ಮೊಯ್ಲಿ, ಸದಾನಂದ ಗೌಡ್ರು ಮುಖ್ಯಮಂತ್ರಿ ಆದಾಗಲೂ ಇದನ್ನು ಮಾಡಿಸೋಕೆ ಆಗಿಲ್ವಾ ರೀ. ಏನ್ ಶಾಸಕರೀ ನಿಮ್ ಕಡೆಯವರು?’

ಕೆಲಸದ ನಿಮಿತ್ತ, ಪ್ರವಾಸದ ನಿಮಿತ್ತ ಮಂಗಳೂರಿಗೆ ಆಗಮಿಸಿದ ಅನ್ಯ ಜಿಲ್ಲೆಯ ನಾಗರಿಕರು ಸ್ಟೇಟ್ ಬ್ಯಾಂಕ್ ಬಳಿಯ ಬಸ್ ಸ್ಟಾಂಡ್ ಕಂಡ ಕೂಡಲೇ ಬೆಚ್ಚಿ ಬೀಳುತ್ತಾರೆ. ತನ್ನಿಂದ ತಾನಾಗಿ ಅವರ ಬಾಯಿಯಿಂದ ಆಕ್ಷೇಪದ ಮಾತು ಹೊರಬೀಳುತ್ತದೆ.


ಅದೊಂದು ಚಕ್ರವ್ಯೂಹ ಮಾದರಿಯ ಬಸ್ ನಿಲ್ದಾಣ. ಒಳ ಹೊಕ್ಕವ ಹೊರಗೆ ಬರುವುದು ಸ್ವಲ್ಪ ಕಷ್ಟ. ಒಂದು ಕಡೆಯಲ್ಲಿ ಉದ್ದಕ್ಕೆ ಇರುವ ಮೀನು ಮಾರುಕಟ್ಟೆ, ಇನ್ನೊಂದು ಕಡೆ ಕಾರ್ಪೋರೇಷನ್ ಬ್ಯಾಂಕ್ ಪ್ರಾಯೋಜಿತ ಪಾರ್ಕ್ ನ ಎತ್ತರದ ಗೋಡೆ, ಮತ್ತೊಂದು ಕಡೆ ಗೋಡೆ ಕಟ್ಟಿರುವ ಹಾಗೆ ಗೂಡಂಗಡಿ, ಆಮ್ಲೆಟ್ ಸ್ಟಾಲ್, ತಳ್ಳುಗಾಡಿ, ಫ್ರೂಟ್ಸ್ ಗಾಡಿ, ತಂಪು ಪಾನೀಯ ಮುಂತಾದುವುಗಳು. ಮಗದೊಂದು ಕಡೆಯಲ್ಲಿ ಮೆಸ್ಕಾಂ ಕಚೇರಿ. ಇವೆಲ್ಲದರ ನಡುವೆ ಎರಡು ಬದಿಗಳಲ್ಲಿ ಬಸ್ ನುಸುಳಿಕೊಂಡು ಒಳಬಂದು ಹೊರಗೆ ಹೋಗುವಷ್ಟು ಇಕ್ಕಟ್ಟಾದ ಮಾರ್ಗ. ಈ ವ್ಯವಸ್ಥೆ ಕಳೆದ ಮೂರು ದಶಕಗಳಿಂದಲೂ ಹಾಗೆಯೇ ಇದೆ. ಆದರೆ ರಾಜ್ಯದಲ್ಲಿ ಈ ನಡುವೆ ಹಲವು ಸರಕಾರಗಳು ಅಸ್ತಿತ್ವಕ್ಕೆ ಬಂದು ಹೋಗಿವೆ. ದಕ್ಷಿಣ ಕನ್ನಡ ಜಿಲ್ಲೆ ಹಲವು ಮಂದಿ ಉಸ್ತುವಾರಿ ಸಚಿವರುಗಳನ್ನು ಕಂಡಿದೆ. ಹಲವು ಮಂದಿ ಶಾಸಕರಾಗಿದ್ದಾರೆ. ಹಾಗೆ ಸಂಸದರಾಗಿದ್ದಾರೆ. ಉಪಯೋಗ ಮಾತ್ರ ಶೂನ್ಯ. ಬಿಜೆಪಿ ಸರಕಾರದಲ್ಲಿ


ಜೆ. ಕೃಷ್ಣ ಪಾಲೆಮಾರ್ ಅವರು ಉಸ್ತುವಾರಿ ಸಚಿವರಾಗಿದ್ದಾಗ ಪಂಪ್ ವೆಲ್ ಬಳಿಯ ಜಾಗವನ್ನು ನೂತನ ಸರ್ವಿಸ್ ಬಸ್ ನಿಲ್ದಾಣಕ್ಕೆ ನಿಗದಿಪಡಿಸಲಾಯಿತು. ಆದರೆ ಅವರು ಅಧಿಕಾರ ಕಳೆದುಕೊಳ್ಳುವವರೆಗೆ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ನಂತರ ಕಾಂಗ್ರೆಸ್ ಆಡಳಿತಕ್ಕೆ ಬಂತು. ಬಿ. ರಮಾನಾಥ ರೈ ಅವರು ಉಸ್ತುವಾರಿ ಸಚಿವರಾದರು. ಆದರೆ ಅವರ ಅಧಿಕಾರದ ಅವಧಿಯಲ್ಲೂ ನೂತನ ಸರ್ವಿಸ್ ಬಸ್ ನಿಲ್ದಾಣಕ್ಕೆ ಅಡಿಪಾಯ ಹಾಕಲು ಸಾಧ್ಯವಾಗಲಿಲ್ಲ. ಮತ್ತೆ ಬಿಜೆಪಿ ಗದ್ದುಗೆ ಏರಿತು. ಕೋಟ ಶ್ರೀನಿವಾಸ ಪೂಜಾರಿ ಅವರು ಉಸ್ತುವಾರಿ ಸಚಿವರಾದರು. ಇವರಿಗೂ ಬಸ್ ನಿಲ್ದಾಣದ ಕುರಿತಂತೆ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಈಗ ಸುನಿಲ್ ಕುಮಾರ್ ಅವರು ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿದ್ದಾರೆ. ಎಲ್ಲರೂ ಮತ್ತೆ ಆಸೆಗಣ್ಣಿನಿಂದ ಅವರತ್ತ ನೋಡುತ್ತಿದ್ದಾರೆ. ವಾಸ್ತವದಲ್ಲಿ ಯಾವುದೇ ಜನಪ್ರತಿನಿಧಿಗಳಿಗೆ ಮಂಗಳೂರಿಗೊಂದು ಸುಸಜ್ಜಿತ ಬಸ್ ನಿಲ್ದಾಣ ಬೇಕೆಂಬ ಕನಸಿಲ್ಲ. ಯಾಕೆಂದರೆ ಇವರು ಯಾರೂ ವೈಕುಂಠ ಬಾಳಿಗ, ಡಾ. ವಿ.ಎಸ್. ಆಚಾರ್ಯ, ಬ್ಲೇಸಿಯಸ್ ಎಂಡಿ ಸೋಜ, ಬಾಕಿಲ ಹುಕ್ರಪ್ಪ ಅವರ ತರಹ ಬಸ್ ನಲ್ಲಿ ಓಡಾಡುವುದಿಲ್ಲ. ಚಾರ್ಟರ್ ಫ್ಲೈಟ್ ನಲ್ಲಿ ಓಡಾಡುವಷ್ಟು ಸಮರ್ಥರಿದ್ದಾರೆ. ಹಾಗಿರುವಾಗ ಯಾಕೆ ಬೇಕ್ರಿ ಬಸ್ ಸ್ಟಾಂಡ್. ಓನ್ಲಿ ಏರ್ ಪೋರ್ಟ್!

ಇತ್ತೀಚಿನ ಸುದ್ದಿ

ಜಾಹೀರಾತು