10:54 AM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಗ್ಯಾರಂಟಿ ನೀಡುತ್ತೇವೆ, ಅಭಿವೃದ್ಧಿಯೂ ಮಾಡುತ್ತೇವೆ: ಸಂಡೂರು ಅಭಿನಂದನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ

08/12/2024, 23:42

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಜನಾರ್ಧನ‌ ರೆಡ್ಡಿ ಸಂಡೂರು ವಿಧಾನಸಭಾ ಕ್ಷೇತ್ರವನ್ನು ಗೆದ್ದೇ ಗೆಲ್ಲಿಸ್ತಿನಿ ಎಂದು ಜವಾಬ್ದಾರಿ ಹೊತ್ತಿದ್ದರು. ಲೋಕಾಯುಕ್ತ ಸಂತೋಷ್ ಹೆಗಡೆ ವರದಿಯಂತೆ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದವರು ‘ರಿಪಬ್ಲಿಕ್ ಆಫ್ ಸಂಡೂರು’ ಮಾಡಲು‌ ಹೊರಟಿದ್ದರು. ಸಂಡೂರಿನ ಜನ ಅವರ ಆಟೋಟೋಪಗಳಿಗೆ ಬಲಿಯಾಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ ಹೇಳಿದರು.


ಸಂಡೂರು ಉಪ‌ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿನ ವಿಶ್ವಾಸ್ ಲಾಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಬೆಂಬಲಿಸಿದ ಮತದಾರರಿಗೆ ಋಣಿಯಾಗಿರುತ್ತೇನೆ. ಶಿಗ್ಗಾಂವಿ, ಚನ್ನಪಟ್ಟಣ‌ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಅವರ ಕ್ಷೇತ್ರಗಳಾಗಿದ್ದಾಗ್ಯೂ ಜನ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರು. ಡಾ.‌ರಾಜ್‌ಕುಮಾರ್ ಅಭಿಮಾನಿ‌ ದೇವರುಗಳೆಂದಂತೆ ನಾನು ಮತದಾರ ದೇವರುಗಳೆನ್ನುತ್ತೇನೆ ಎಂದು ತಿಳಿಸಿದರು.
ಬಿಜೆಪಿಯವರು ರಾಜ್ಯದಲ್ಲಿ ಎಂದೂ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ‌ ಅಧಿಕಾರಕ್ಕೆ ಬಂದವರು. ಸುಭದ್ರ ಸರ್ಕಾರವನ್ನೂ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷ 5 ವರ್ಷವೂ ಅಧಿಕಾರದಲ್ಲಿ‌‌ ಇರಲಿದೆ. ಗ್ಯಾರಂಟಿ ಯೋಜನೆಗಳು 2028ರ‌ ತನಕವೂ ಮುಂದುವರೆಯಲಿವೆ. ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ ಎಂಬುದು ಸುಳ್ಳು.‌ ಗ್ಯಾರಂಟಿ ನೀಡುತ್ತವೇ ,ಅಭಿವೃದ್ಧಿಯನ್ನೂ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ‌. ಶಿವಕುಮಾರ್ ಮಾತನಾಡಿ, ‘ರಾಜ್ಯದಲ್ಲಿ ಈಗ ನಮ್ಮವು 138 ಸ್ಥಾನಗಳಾಗಿವೆ . ಕೆಲವು ಬಿಜೆಪಿ ಶಾಸಕ ಸ್ನೇಹಿತರೂ ನಮ್ಮೊಂದಿಗಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ದೇವೇಗೌಡರು ಕಿತ್ತು ಹಾಕುತ್ತೇವೆ ಎನ್ನುತ್ತಿದ್ದಾರೆ ಅದು ಸಾಧ್ಯವಿಲ್ಲ. ತುಂಗಭದ್ರಾ ಗೇಟು ಸಮಸ್ಯೆಯಾದಾಗ ಆರ್.ಅಶೋಕ್ ,ಜನಾರ್ಧನ‌ ರೆಡ್ಡಿ ಟೀಕೆ ಮಾಡಿದ್ದರು. ಟೀಕೆ ಸಾಯುತ್ತದೆ, ಕೆಲಸ ಉಳಿಯುತ್ತದೆ ಎಂಬುದನ್ನು ತೋರಿಸಿದ್ದೇವೆ’ ಎಂದರು.
ಕಾರ್ಮಿಕ‌ ಸಚಿವ ಸಂತೋಷ್ ಲಾಡ್ ಮಾತನಾಡಿ, ಶಾಸಕಿ ಅನ್ನಪೂರ್ಣ ಅವರಿಗೆ ಆಶೀರ್ವದಿಸಿ ಕಾಂಗ್ರೆಸ್ ಬಾವುಟ ಆರಿಸಿದ್ದಕ್ಕೆ‌ ಮತದಾರರಿಗೆ‌ ಧನ್ಯವಾದ. ಸಂಡೂರು ಕ್ಷೇತ್ರದ ಮತದಾರರು ಸದಾ‌ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ 3 ದಿನ ಕ್ಷೇತ್ರದಲ್ಲಿ ಉಳಿದು 18 ಕಾರ್ಯಕ್ರಮ ಮಾಡಿದ್ದರಿಂದ ಗೆಲುವು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಂಸದ ಈ.ತುಕಾರಾಮ್ ಮಾತನಾಡಿ, ಗ್ಯಾರಂಟಿ ಯೋಜನೆಗಳು ಈ‌ ಬಾರಿಯ ಚುನಾವಣೆಯಲ್ಲಿ ಸಹಕಾರಿ‌ ಆದವು. ಬಿಜೆಪಿಯವರು ಅನೇಕ‌ ಸುಳ್ಳು ಹೇಳಿದರು. 2011 ರಿಂದ ಜೈಲಿನಲ್ಲಿದ್ದ ಜನಾರ್ಧನ ರೆಡ್ಡಿ ಸಂಡೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವರಿಗೇನು ಗೊತ್ತು ಎಂದರು.
ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿ, ‘ಸಂತೋಷ್ ಲಾಡ್ ,ತುಕಾರಾಂ ಅವರ ‘ಸಂಡೂರು ಮಾದರಿ ಅಭಿವೃದ್ಧಿ’ಯನ್ನು ಮುಂದುವರೆಸುವೆ. ಬುದ್ಧ,ಬಸವ,ಅಂಬೇಡ್ಕರ್ ಆದರ್ಶಗಳಿಂದ ದ್ವೇಷದ ರಾಜಕೀಯ ಮಾಡದೆ ಸಮೃದ್ಧ ಕ್ಷೇತ್ರ ಕಟ್ಟೋಣ’ ಎಂದು ತಿಳಿಸಿದರು.
ಸಚಿವ ಜಮೀರ್ ಅಹ್ಮದ್ , ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಾತನಾಡಿದರು.
ಶಾಸಕರಾದ ಜೆ.ಎನ್. ಗಣೇಶ್, ಡಾ.ಶ್ರೀನಿವಾಸ್ ,ಬಿ.ಎಂ.ನಾಗರಾಜ್, ಮಾಜಿ ಸಚಿವ ಪರಮೇಶ್ವರ್ ನಾಯ್ಕ್, ಕೆಎಸ್ಎಲ್ ಸ್ವಾಮಿ, ಸಿರಾಜ್ ಶೇಖ್, ಅಲ್ಲಂ ಪ್ರಶಾಂತ್, ಬಿ.ಎಂ.ಪಾಟೀಲ್, ಮುಂಡ್ರಿಗಿ ನಾಗರಾಜ್, ನಜೀರ್ ಅಹ್ಮದ್, ಶಿವಯೋಗಿ, ಚಿದಾನಂದ್, ತುಮಟಿ ಲಕ್ಷ್ಮಣ, ವಿಶ್ವಾಸ್ ಲಾಡ್, ಆಶಾಲತಾ‌ ಸೋಮಪ್ಪ, ಏಕಾಂಬರಪ್ಪ, ಜಯರಾಮ್ ಇತರೆ ಮುಖಂಡರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು