9:25 AM Thursday18 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಗುಂಡಿ ಬಿದ್ದ ಮುರುವ- ಅರಳತ್ತಡ್ಕ ರಸ್ತೆ: ಸಂಕಷ್ಟದಲ್ಲಿ ಪಾದಚಾರಿಗಳು, ವಾಹನ ಸವಾರರು

05/08/2023, 23:16

ಬಂಟ್ವಾಳ(reporterkarnataka.com):ಮಾಣಿಲ ಗ್ರಾಮದ ಮುಖ್ಯ ರಸ್ತೆಗಳಲ್ಲೊಂದು ಮುರುವ ಕೊಮ್ಮುಂಜೆ ಕೂಟೇಲು. ಸುಮಾರು ಇನ್ನೂರೈವತ್ತು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮೂರು ಅಂಗನವಾಡಿಗಳು, ಆಂಚೆ ಕಚೀರಿ, ಗ್ರಾಮ ಪಂಚಾಯತ್, ಸಹಕಾರಿ ಸಂಘ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕರ್ನಾಟಕ ಬ್ಯಾಂಕ್ ಗ್ರಂಥಾಲಯ, ಗ್ರಾಮ ಆಡಳಿತಾಧಿಕಾರಿ ಕಛೇರಿ ಮುಂತಾದವು ಈ ರಸ್ತೆಗೆ ಹೊಂದಿಕೊಂಡಿವೆ. ಪ್ರತಿದಿನ ಹತ್ತಾರು ವಾಹನಗಳು,
ಶಾಲಾ ವಿದ್ಯಾರ್ಥಿಗಳು, ನಗರಕ್ಕೆ ಉದ್ಯೋಗ ಕ್ಕೆ, ಮತ್ತು ಅನ್ಯಕೆಲಸಗಳಿಗೆ, ಆಸ್ಪತ್ರೆಗೆ ತೆರಳುವ ಮಂದಿ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ.


ಸುಮಾರು ಐದು ಕಿ.ಮೀ.ಇರುವ ಈ ರಸ್ತೆಯು ಮೂರು ಕಿ.ಮೀ.ಯಷ್ಟು ಹಂತ ಹಂತವಾಗಿ ಡಾಮರೀಕರಣಗೊಂಡಿದೆ. ಮುರುವ ರಿಂದ ಅರಳತ್ತಡ್ಕ ದ ಸುಮಾರು ಒಂದೂವರೆ ಕಿ.ಮೀ.ವರೇಗೆ 2019=20ರಲ್ಲಿ MPLAD ಅನುದಾನದ 8 ಲಕ್ಷದಲ್ಲಿ ಪುನಃ ತೇಪೆ ಹಚ್ಚುವ ಕೆಲಸ ಜರುಗಿತ್ತು. ಈಗ ಈ ಭಾಗದ ರಸ್ತೆಯು ಸಂಪೂರ್ಣ ಹೊಂಡ ಗುಂಡಿ ಬಿದ್ದು ನಾದುರಸ್ತಿಯಲ್ಲಿದೆ. ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲವಂತೂ ಅಸಹನೀಯವೆನಿಸಿದೆ. ಜನಪ್ರತಿನಿಧಿಗಳು ಇತ್ತು ಗಮನ ಹರಿಸಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು