8:20 PM Friday4 - April 2025
ಬ್ರೇಕಿಂಗ್ ನ್ಯೂಸ್
Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ Solar power | ದೇಶದ 2,249 ರೈಲು ನಿಲ್ದಾಣಗಳಲ್ಲಿ 209 ಮೆಗಾವ್ಯಾಟ್‌ ಸೌರ… EX CM | ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ತಿದ್ದುಪಡಿ… Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಗುಜ್ಜರಕೆರೆ – ಅರೆಕೆರೆ ಬೈಲಿನಲ್ಲಿ ಉಕ್ಕುವ ಡ್ರೈನೇಜ್: ಮೇಯರ್ ಅವರೇ, ಸಮಸ್ಯೆ ಪರಿಹಾರಕ್ಕೆ ಇನ್ನೆಷ್ಟು ದಶಕಗಳು ಬೇಕು?  

19/06/2021, 18:52


ಮಂಗಳೂರು(reporterkarnataka news)
:

‘ನಿತ್ಯ ಸಾಯುವವರಿಗೆ ಆಳುವವರು ಯಾರು?’ ಎನ್ನುವಂತಾಗಿದೆ ಐತಿಹಾಸಿಕ ಗುಜ್ಜರಕೆರೆ ಅರೆಕೆರೆ ಬೈಲು ಪ್ರದೇಶದ ಸ್ಥಿತಿ. ಮಳೆ ಬಂದಾಗಲೆಲ್ಲ ಇಲ್ಲಿನ ನಿವಾಸಿಗಳಿಗೆ ಕಷ್ಟ ತಪ್ಪಿದಲ್ಲ. ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿರಲಿ, ಬಿಜೆಪಿ ಆಡಳಿತದಲ್ಲಿರಲಿ ಇಲ್ಲಿನ ಸ್ಥಿತಿಯಲ್ಲಿ ಮಾತ್ರ ಏನೂ ಬದಲಾವಣೆಯಾಗದು. ಅದೇನೆಂದರೆ ಕಾರಂಜಿ ತರಹ ನೀರು ಚಿಮ್ಮಿಸುವ ಡ್ರೈನೇಜ್ ಮ್ಯಾನ್ ಹೋಲ್ ಗಳು.!

ಹಲವು ವರ್ಷಗಳಿಂದ ಈ ಸಮಸ್ಯೆ ಜೀವಂತವಾಗಿಯೇ ಇದೆ. ಪಾಲಿಕೆಯಲ್ಲಿ ದಶಕಗಳ ಕಾಲದಿಂದ ಆಡಳಿತ ನಡೆಸಿದ ಕಾಂಗ್ರೆಸ್ ಗೆ ಇದನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ನಂತರ ಬಿಜೆಪಿಗೆ ಮೊದಲ ಬಾರಿಗೆ ಪಾಲಿಕೆಯಲ್ಲಿ ಅವಕಾಶ ಸಿಕ್ಕಿದಾಗಲೂ ಅವರಿಂದಲೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅವರು ಮತ್ತೊಮ್ಮೆ ಕೈ ಚೆಲ್ಲಿದರು. ಇದೀಗ ಬಿಜೆಪಿ ಎರಡನೇ ಬಾರಿ ಪಾಲಿಕೆ ಗದ್ದುಗೆ ಏರಿದೆ. ಗುಜ್ಜರಕೆರೆ ಸಮೀಪದ ನಿವಾಸಿಯಾದ ಪ್ರೇಮಾನಂದ ಶೆಟ್ಟಿ ಅವರೇ ಮೇಯರ್ ಆಗಿ ಅಧಿಕಾರದಲ್ಲಿದ್ದಾರೆ. ಅವರಾದರೂ ಸ್ಪಂದಿಸಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವರೇ ಎಂದು ಸ್ಥಳೀಯ ನಾಗರಿಕರು ಕಾತರದಿಂದ ಎದುರು ನೋಡುತ್ತಿದ್ದಾರೆ.

ಇಲ್ಲಿನ ಸಮಸ್ಯೆಯೆಂದರೆ ಮಳೆ  ಬಂದಾಗಲೆಲ್ಲ ಐತಿಹಾಸಿಕ ಗುಜ್ಜರಕೆರೆ ಸಮೀಪದ ಅರೆಕೆರೆಬೈಲು ಪ್ರದೇಶದಲ್ಲಿ  ಡ್ರೈನೇಜ್ ನಿಂದ ನೀರು 

ಉಕ್ಕಿ ರಸ್ತೆಯಲ್ಲಿ ಹರಿಯಲಾರಂಭಿಸುತ್ತದೆ. ಈ ಕೊಳಕು ನೀರು ಆಸುಪಾಸಿನ ಮನೆಗಳ ಆವರಣಕ್ಕೂ ನುಗ್ಗುತ್ತದೆ. ಚರಂಡಿ ನೀರು ತುಂಬಿ

ರಸ್ತೆಯಲ್ಲಿ ಕೊಳಕು ವಾತಾವರಣ ನಿರ್ಮಾಣವಾಗುತ್ತದೆ. ಸೊಳ್ಳೆ ಉತ್ಪನ್ನಕ್ಕೆ ದಾರಿಯಾಗುತ್ತದೆ.

ಈ ಪ್ರದೇಶದಲ್ಲಿ ಮಳೆ ನೀರು ಚರಂಡಿ ಹಾಗೂ ಡ್ರೈನೇಜ್ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಸಮಸ್ಯೆ ಪರಿಹಾರವಾಗಿಲ್ಲ. ಸ್ಥಳೀಯರು

ಈ ಸಮಸ್ಯೆ ಹಲವು ವರ್ಷಗಳಿಂದ ಗೋಳಾಗಿ ಪರಿಣಮಿಸಿದೆ.  ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾದಾಗ, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಬಳಿಕ  ಸ್ಥಳಕ್ಕಾಗಮಿಸುವ ಪಾಲಿಕೆಯ ಎಂಜಿನಿಯರ್, ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಬೇಸಿಗೆ ಕಾಲದಲ್ಲಿ ಯಾವುದೇ ಕಾಮಗಾರಿಗಳನ್ನು ನಿರ್ವಹಿಸದೆ, ಜಾಣ ಕುರುಡತನ ತೋರುವ ಇವರು ಮಳೆಗಾಲದಲ್ಲಿ ನೆಪ ಮಾತ್ರಕ್ಕೆ ಕೆಲಸ ನಿರ್ವಹಿಸಿ ಕಣ್ಣೊರೆಸುವ ತಂತ್ರವನ್ನು ಹಲವು ವರ್ಷಗಳಿಂದ ಪಾಲಿಸುತ್ತಿದ್ದಾರೆ.

ಹಿಂದಿನ ಸ್ಥಳೀಯ ಜನಪ್ರತಿನಿಧಿಗಳು ಕಣ್ಣೊರೆಸುವ ತಂತ್ರ ಪಾಲಿಸಿ ತಮ್ಮ ಅಧಿಕಾರ ಪೂರೈಸಿ ಈ ಸಮಸ್ಯೆಯನ್ನು ಬಗೆಹರಿಸದೆ ಹಾಗೆಯೇ ಜೀವಂತವಾಗಿ ಉಳಿಸಿದ್ದು, ಪ್ರಸ್ತುತ ಹೊಸದಾಗಿ ಆಯ್ಕೆಯಾಗಿರುವ ಪಾಲಿಕೆ ಸ್ಥಳೀಯ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಪೂರಕ ಸ್ಪಂದನೆ ಇಲ್ಲಿಯವರೆಗೆ  ನೀಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಕಳೆದ ವರ್ಷ ಡೆಂಗ್ಯೂ ಪ್ರಕರಣಗಳು ಈ ಭಾಗದಲ್ಲಿ ಉಲ್ಬಣಿಸಲು ಇಲ್ಲಿನ ಚರಂಡಿಗಳ ಅವ್ಯವಸ್ಥೆ ಪ್ರಮುಖ ಕಾರಣವಾಗಿತ್ತು. ಈ ಬಾರಿಯೂ ಇಲ್ಲಿನ ಚರಂಡಿಗಳ ಅವ್ಯವಸ್ಥೆಯ ಕಾರಣದಿಂದಾಗಿ ಹಾಗೂ ಪ್ರಮುಖವಾಗಿ ಸಂಬಂಧ ಪಟ್ಟವರ ಬೇಜವಾಬ್ದಾರಿತನದಿಂದ  ಸಮಸ್ಯೆಗಳು ಸೃಷ್ಟಿಯಾಗುವ ಭೀತಿ ಸ್ಥಳೀಯರಲ್ಲಿ ಎದುರಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು