ಇತ್ತೀಚಿನ ಸುದ್ದಿ
ಗುಜರಾತಿನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ: ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ವಾಸ
05/12/2022, 14:59

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಗುಜರಾತಿನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು
ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಮತ್ತೆ ಬಿಜೆಪಿ ಅಧಿಕಾರ ಬರುತ್ತೆ. ಹಿಂದಿನ ಚುನಾಚಣೆಯಲ್ಲಿ ತೆಗೆದುಕೊಂಡ ಸೀಟಿಗಿಂತ ಹೆಚ್ಚು ಸ್ಥಾನ ಬರುತ್ತೆ. ನಾಮ್ ಮತ್ತು ಕಾಮ್ ಇವೆರಡರ ಆಧಾರದಲ್ಲಿ ಜನ ಮತ ಹಾಕುತ್ತಾರೆ. ಪ್ರಧಾನಿ ಮೋದಿ, ಗುಜರಾತ್ ಸರ್ಕಾರದ ಸಾಧನೆಗೆ ಜನರು ಮತ ಹಾಕ್ತಾರೆ.
ಚುನಾವಣಾ ಫಲಿತಾಂಶದಿಂದ ರಾವಣ ಯಾರು ರಾಮ ಯಾರು ಎನ್ನುವುದು ಗೊತ್ತಾಗುತ್ತೆ. ರಾಮ ಮತ್ತೆ ಗೆದ್ದು ಬರ್ತಾನೆ. ರಾಮನ ಹಿಂಬಾಲಿಸುವ ಪಕ್ಷ ಮತ್ತೆ ಗೆದ್ದೆ ಬರುತ್ತದೆ. ರಾವಣ ಶಕ್ತಿಗಳು ನಾಶವಾಗುತ್ತದೆ ಎಂದರು.
ಖರ್ಗೆಯವರಿಗೆ ಚಿಂತೆ ಬೇಡ, ರಾವಣನ ನಾಶ ಶತಸಿದ್ಧ ಎಂದು ರವಿ ನುಡಿದರು.