ಇತ್ತೀಚಿನ ಸುದ್ದಿ
ಗೃಹಲಕ್ಷ್ಮೀ ಯೋಜನೆಗೆ ನಕಲಿ ಕಾಟ!: ಸೈಬರ್ ಸೆಂಟರ್ ಗಳಲ್ಲಿ 100ರಿಂದ 200 ರೂಪಾಯಿಗೆ ಮಾರಾಟವಾಗುತ್ತಿರುವ ಡುಬ್ಲಿಕೇಟ್ ಅರ್ಜಿ!!
19/07/2023, 10:07
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ನಕಲಿ ಕಾಟ ಶುರುವಾಗಿದೆ. ಬಡವರಿಗೆ ಸಹಾಯವಾಗುವ ಯಾವುದೇ ಯೋಜನೆ ಜಾರಿಗೊಳಿಸಿದರೂ ಅದನ್ನು ವಿಫಲಗೊಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ.
ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕಲಿ ಅರ್ಜಿಗಳ ಮಾರಾಟ ಶುರುವಾಗಿದೆ. ಜಿಲ್ಲೆಯ ಹಲವೆಡೆ ನಕಲಿ ನೋಂದಣಿ ಪತ್ರಗಳ ಮಾರಾಟ ನಡೆಯುತ್ತಿದೆ. 100 ರಿಂದ 200 ರೂಪಾಯಿಗೆ ಅರ್ಜಿಗಳ ಮಾರಾಟ ಮಾಡಿ, ಹಣ ಮಾಡಲಾಗುತ್ತಿದೆ.
ನಕಲಿ ಅರ್ಜಿಯಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಫೋಟೋ ಬಳಕೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹಲವು ಸೈಬರ್ ಸೆಂಟರ್ ಗಳಲ್ಲಿ ನಕಲಿ ಅರ್ಜಿಗಳ ಹಾವಳಿ ಜಾಸ್ತಿಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶೃಂಗೇರಿ ಯುವ ಕಾಂಗ್ರೆಸ್ ಆಗ್ರಹಿಸಿದೆ. ಶೀಘ್ರ ಕ್ರಮಕ್ಕೆ ಶೃಂಗೇರಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಗಿದೆ.