ಇತ್ತೀಚಿನ ಸುದ್ದಿ
ಗ್ರೇಟ್ ರೆಸ್ಕ್ಯೂ: 50 ಅಡಿ ಆಳದ ಬಾವಿಯಿಂದ ಹಸುವನ್ನು ಮೇಲಕೆತ್ತಿದ್ದ ಅಗ್ನಶಾಮಕ ದಳ ಸಿಬ್ಬಂದಿ
09/07/2023, 22:44

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸುಮಾರು 50 ಅಡಿ ಆಳದ ಬಾವಿಗೆ ಬಿದ್ದಿದ್ದ ಹಸುವನ್ನು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ ರೋಮಾಂಚನಕಾರಿ ಘಟನೆಗೆ ಕೊಪ್ಪ ತಾಲೂಕಿನ ಗ್ರಾಮವೊಂದು ಸಾಕ್ಷಿಯಾಗಿದೆ
ಮೇಯುವಾಗ ಆಯಾ ತಪ್ಪಿ ಹಸು ಬಾವಿಗೆ ಬಿದ್ದಿತ್ತು. ಕೊಪ್ಪ ತಾಲೂಕಿನ ಅಬ್ಬಿಗದ್ದೆ-ಕಾಚುಗಲ್ ರಸ್ತೆ ಬಳಿ ಘಟನೆ ನಡೆದಿದೆ.
ಅಗ್ನಿಶಾಮಕ ದಳದ ಸಿಬ್ಬಂದ ಸೊಂಟಕ್ಕೆ ಹಗ್ಗ ಕಟ್ಟಿ ಬಾವಿಗೆ ಇಳಿದು
50 ಅಡಿ ಆಳದ ಬಾವಿಯಲ್ಲಿದ್ದ ಹಸು ಬೆನ್ನಿಗೆ ಹಗ್ಗ ಕಟ್ಟಿ
ಹಸುವನ್ನ ಸುರಕ್ಷಿತವಾಗಿ ಅಗ್ನಿಶಾಮಕ ಸಿಬ್ಬಂದಿಗಳು ಮೇಲೆತ್ತಿದ್ದಾರೆ.