4:01 AM Monday19 - January 2026
ಬ್ರೇಕಿಂಗ್ ನ್ಯೂಸ್
ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ

ಇತ್ತೀಚಿನ ಸುದ್ದಿ

ಗ್ರಾಮೀಣ ಪ್ರದೇಶಗಳಲ್ಲಿ ಮಣಿಪಾಲ್ ಆಸ್ಪತ್ರೆಗಳ ಸೇವೆ ಅನನ್ಯವಾದದ್ದು: ಡಾ. ಶರತ್ ರಾವ್

26/02/2024, 22:02

ಕಾರ್ಕಳ(reporterkarnataka.com): ಗ್ರಾಮೀಣ ಪ್ರದೇಶಗಳಲ್ಲಿ ಮಣಿಪಾಲ್ ಆಸ್ಪತ್ರೆಗಳ ಸೇವೆ ಅನನ್ಯವಾದದ್ದು ಎಂದು ಮಣಿಪಾಲ ವಿಶ್ವವಿದ್ಯಾನಿಲಯ ದ ಸಹ ಕುಲಪತಿ ಡಾ. ಶರತ್ ರಾವ್ ಹೇಳಿದರು.

ಅವರು ಅಜೆಕಾರು ಶ್ರೀ ರಾಮಮಂದಿರ ಟ್ರಸ್ಟ್, ಅಜೆಕಾರು ಸಾರ್ವಜನಿಕ ಶಾರದ ಮಹೋತ್ಸವ ಸಮಿತಿ , ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಾಹೆ ಮಣಿಪಾಲ, ಕಾರ್ಡಿಯಾಲಜಿ ಅಟ್ ಡೋರ್ಸ್ಟೆಪ್ ಫೌಂಡೇಶನ್ (ಕ್ಯಾಡ್) ಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಹೆಸರಾಂತ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಅವರ ತಂಡದಿಂದ ನೇತೃತ್ವದಲ್ಲಿ ಅಜೆಕಾರು ರಾಮಮಂದಿರದಲ್ಲಿ ನಡೆದ  ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಬಡ ಹಾಗೂ ‌ಮಧ್ಯಮ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ .
ಸಕಾಲಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ದೊರಕುವುದು ಕಷ್ಟ ಸಾಧ್ಯ .ಈ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಗಳು ನಡೆಸಿ ಬಡ ಹಾಗೂ ಮಧ್ಯಮ ವರ್ಗಗಳ  ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಮಣಿಪಾಲ ಆಸ್ಪತ್ರೆಗಳು ಆರೋಗ್ಯ ದ ಕಾಳಜಿಗೆ ಮಹತ್ವ ನೀಡುತ್ತಿವೆ ಎಂದರು.
ಮಂಗಳೂರಿನ ಹೆಸರಾಂತ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಮಾತನಾಡಿ, ಅಜೆಕಾರು ಭಾಗದಲ್ಲಿ  ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಗೊಂಡರೆ ರೋಗಿಗಳು ಸಕಾಲ ಚಿಕೆತ್ಸೆಗಳಿಗೆ ದೂರದ ನಗರಗಳಿಗೆ  ಅಲೆಯಬೇಕಾಗಿಲ್ಲ ಎಂದರು.
ಶಿಬಿರಗಳಲ್ಲಿ ತೊಡಗಿಸಿಕೊಂಡ ಗ್ರಾಮ‌ ವ್ಯಾಪ್ತಿಗಳ ಎಲ್ಲಾ ಇಸಿಜಿ ಕೇಂದ್ರ ಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶ್ರಮಿಸಿದ ದಾದಿಯರು ಹಾಗೂ ವೈದ್ಯರ  ಸೇವೆಗಳನ್ನು ಕೊಂಡಾಡಿದರು . ಶಿಬಿರ ಆಯೋಜಿಸಿದ ಆಯೋಜಕರಿಗೆ ಧನ್ಯವಾದ ವಿತ್ತರು.
ಮಲೇಕಾ ಮಣಿಪಾಲದ ಡೀನ್ ಡಾ| ಉಲ್ಲಾಸ್ ಕಾಮತ್,
ಡಾ|ಶರತ್ ರಾವ್ ಅವರನ್ನು ಪರಿಚಯಿಸಿದರು. ಸಭೆಯಲ್ಲಿ ಡಾ. ನಿರಂಜನ್, ಕಾರ್ಕಳ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಯ ಮುಖ್ಯ ವೈದ್ಯಾಧಿಕಾರಿ ಕೀರ್ತಿನಾಥ ಬಳ್ಳಾಲ್ , ಅಜೆಕಾರು ಶಾರದೋತ್ಸವ ಸಮಿತಿಯ ಸಂದೀಪ್ ಶೆಟ್ಟಿ, ನಡಿಮಾರು ಜಯರಾಜ್ ಹೆಗ್ಡೆ , ಪ್ರದೀಪ್ ಹೆಗ್ಡೆ,
ಅಜೆಕಾರು ರಾಮ ಮಂಡಿರ ಟ್ರಸ್ಟ್‌ ನ ಅಧ್ಯಕ್ಷ ಪ್ರೇಮಾನಂದಶೆಣೈ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಡಾ|ಪದ್ಮನಾಭ ಕಾಮತ್ ಅವರನ್ನು ಸನ್ಮಾನಿಸಲಾಯಿತು.  ಸುಭಾಶ್ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಪಾಟ್ಕರ್  ಧನ್ಯವಾದ ವಿತ್ತರು.
ಶಿಬಿರದಲ್ಲಿ 750ಕ್ಕೂ ಅಧಿಕ ಶಿಭಿರಾರ್ಥಿಗಳು, 500ಕ್ಕೂ ಅಧಿಕ ಇಸಿಜಿ , 47 ನುರಿತ  ವೈದ್ಯರುಗಳು
20 ಸಮುದಾಯ ಅಧಿಕಾರಿಗಳು , 100 ಸ್ವಯಂಸೇವಕರು,  30 ವೈದ್ಯಕೀಯ ವಿದ್ಯಾರ್ಥಿಗಳು  ಭಾಗವಹಿಸಿ ಯಶಸ್ವಿಗೊಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು