10:24 PM Tuesday25 - November 2025
ಬ್ರೇಕಿಂಗ್ ನ್ಯೂಸ್
ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ

ಇತ್ತೀಚಿನ ಸುದ್ದಿ

ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

26/10/2024, 22:44

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸೌಭಾಗ್ಯ ಅವರ ಪತಿ ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತಾಲೂಕು ಉಪ್ಪಾರ ಸಮಾಜದ ವತಿಯಿಂದ ವಿಶೇಷ ಸಭೆ ನಡೆಯಿತು.


ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ಉಪ್ಪಾರ ಜನಾಂಗದ ಛತ್ರದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿನ ಉಪ್ಪಾರ ಜನಾಂಗದ ಮುಖಂಡರು ಪಕ್ಷಾತೀತವಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಮೃತರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಲೆ ಕೇಸಿನ ಬಗ್ಗೆ ಚರ್ಚೆ ಸೇರಿದಂತೆ ಈ ಕೇಸಿನಲ್ಲಿ ಸಮಾಜದ ಮುಖಂಡರು ಸೇರಿದಂತೆ ಯಾರೇ ಭಾಗಿಯಾಗಿದ್ದರು ಅವರ ವಿರುದ್ಧವು ಪೊಲೀಸರು ಸೂಕ್ತ ತನಿಖೆ ನಡೆಸಿ ಅವರನ್ನು ಬಂಧಿಸುವಂತೆ, ಮೃತರ ಕುಟುಂಬಕ್ಕೆ ಸಮಾಜದ ವತಿಯಿಂದ ಹಾಗೂ ಸರ್ಕಾರದಿಂದಲೂ ಆರ್ಥಿಕ ನೆರವು ಕೊಡಿಸುವಂತೆಯೂ ಅಲ್ಲದೆ ಮೃತರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರ ಪತ್ನಿಗೆ ಅಧ್ಯಕ್ಷ ಸ್ಥಾನ ಕೊಡಿಸುವಂತೆಯೂ ಚರ್ಚೆ ನಡೆಸಲಾಯಿತು.
ನೊಂದ ಕುಟುಂಬದ ಜೊತೆಗೆ ನಮ್ಮ ಸಮಾಜ ಬೆನ್ನೆಲುಬಾಗಿ ನಿಂತಿದ್ದು ಸಮಾಜದ ವತಿಯಿಂದ ಒಂದು ಲಕ್ಷ ರೂಪಾಯಿ ನಗದು ನೆರವು ನೀಡಿರುವ ತಿಳಿಸಿ ಒಂದು ಲಕ್ಷ ನಗದು ಹಣವನ್ನು ಮೃತರ ಪತ್ನಿಗೆ ನೀಡಲಾಯಿತು.
ಸಭೆಯ ಬಳಿಕ ಸಮಾಜದ ಮುಖಂಡರಾದ ಹೆಮ್ಮರಗಾಲ ಸೋಮಣ್ಣ ಹಾಗೂ ಮೂಗ ಶೆಟ್ಟಿ ಹಾಗೂ ಮೃತನ ಪತ್ನಿ ಸೌಭಾಗ್ಯ ಮಾತನಾಡಿ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ವಿವರಿಸಿದರು.
ಉಪ್ಪಾರ ಸಮಾಜದ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಎಲ್ಲಾ ಮುಖಂಡರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು