ಇತ್ತೀಚಿನ ಸುದ್ದಿ
Govt Bus | ಕೆಎಸ್ಸಾರ್ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ಕಟ್: ಚಾಲಕನ ಚಾಕಚಕ್ಯತೆಯಿಂದ ಭಾರಿ ಅಪಾಯದಿಂದ ಪಾರು
27/02/2025, 18:48

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಾರ್ಮಾಡಿ ಘಾಟ್ ರಸ್ತೆಯ ತಿರುವಿನಲ್ಲೇ ಕೆಎಸ್‌ಆರ್‌ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ತುಂಡಾಗಿದರೂ ಚಾಲಕನ ಚಾಕಚಕ್ಯತೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ KA 17-F-1487 ನಂಬರಿನ ಶಿವಮೊಗ್ಗ ವಿಭಾಗದ ಬಸ್ ಚಾರ್ಮಾಡಿ ಘಾಟ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಹಠಾತ್ ಸ್ಟೀರಿಂಗ್ ಜಾಯಿಂಟ್ ಕಟ್ ಆಗಿತು. ಆದರೆ, ಚಾಲಕ ಎಚ್ಚರಿಕೆಯಿಂದ ಬಸ್‌ನ್ನು ನಿಯಂತ್ರಣಕ್ಕೆ ತಂದು, ಅಪಘಾತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮಯೋಚಿತ ನಿರ್ವಹಣೆಯಿಂದ ಪ್ರಯಾಣಿಕರು ಯಾವುದೇ ಗಾಯಗಳಾಗದೆ ಸುಕ್ಷಿತರಾಗಿದ್ದು, ಪ್ರಯಾಣಿಕರನ್ನು ಬದಲಿ ಬಸ್‌ನಲ್ಲಿ ಕಳಿಸಿಕೊಡಲಾಯಿತು.