ಇತ್ತೀಚಿನ ಸುದ್ದಿ
ಹೆಜ್ಜೆಗಾರಿಕೆ, ಮಾತುಗಾರಿಕೆ, ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದ ಯಕ್ಷಲೋಕದ ದಿಗ್ಗಜ ಗೋವಿಂದ ಭಟ್ ಇನ್ನಿಲ್ಲ
20/03/2026, 23:28
ಮಂಗಳೂರು(reporterkarnataka.com): ಯಕ್ಷಲೋಕದ ದಿಗ್ಗಜ ಸೂರಿಕುಮೇರಿ ಗೋವಿಂದ ಭಟ್ ಇಂದು ಅಸ್ತಂಗತರಾದರು.




ತೆಂಕುತಿಟ್ಟು ಯಕ್ಷಗಾನ ಶೈಲಿಯ ಅಪ್ರತಿಮ ಕಲಾತಪಸ್ವಿ, ದಶಕಗಳ ಕಾಲ ರಂಗಸ್ಥಳವನ್ನು ಆಳಿದ ಹಿರಿಯ ವಿದ್ವಾಂಸರಾದ ಸೂರಿಕುಮೇರು ಕೆ. ಗೋವಿಂದ ಭಟ್ ಅವರು ಯಕ್ಷಗಾನದ ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು. ಗೋವಿಂದ ಭಟ್ಟರು ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಸಿದ್ದಹಸ್ತರು.
ಭ್ರಾಮರೀ ಯಕ್ಷಮಿತ್ರರು ಮಂಗಳೂರು (ರಿ.) ಟ್ರಸ್ಟ್ನ ಪರವಾಗಿ ಅಗಲಿದ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ನಮನ ಸಲ್ಲಿಸಲಾಗಿದೆ.












