12:50 AM Sunday23 - February 2025
ಬ್ರೇಕಿಂಗ್ ನ್ಯೂಸ್
ಸುಗ್ರಿವಾಜ್ಞೆ ಜಾರಿಯಾದರೂ ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ: ಗೃಹ ಸಚಿವರ ತವರಿನಲ್ಲೇ ಇಬ್ಬರು… ಕಂದಾಯ ಇಲಾಖೆ ಅಧಿಕಾರಿಗಳಿಂದ ಮುಜರಾಯಿ ಇಲಾಖೆಯ ಕೋಟ್ಯಂತರ ಹಣ ಗುಳುಂ: ಬ್ಯಾಂಕ್ ಮೆನೇಜರ್… ಬೆಂಗಳೂರಿನ ಅಭಿವೃದ್ಧಿ ಸೊನ್ನೆ, ಬಿಬಿಎಂಪಿ ಚುನಾವಣೆ ನಡೆಸಿ: ಸರಕಾರಕ್ಕೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಳೆ ಬೆಳೆಗೆ ದೃಷ್ಟಿ ತಾಗದಂತೆ ಅರೆಬೆತ್ತಲೆ ಮಾಡಲ್ ಗಳ ಫೋಟೋ ಅಳವಡಿಸಿದ ಕಿಲಾಡಿ… ಹಾವೇರಿ ಜಾನಪದ ವಿಶ್ವವಿದ್ಯಾಲಯ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ?: ರಾಜಕೀಯ ಕರಿನೆರಳು.!? State Budget | ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ… Deeptech & AI | ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನವೋದ್ಯಮಗಳಿಗೆ ನೆರವು: ಸಚಿವದ್ವಯರಾದ… ಇಂದಿರಾ ಕ್ಯಾಂಟಿನಿನಲ್ಲಿ ಕಳಪೆ ಗುಣಮಟ್ಟದ ಆಹಾರ: ಗುತ್ತಿಗೆ ರದ್ದುಪಡಿಸಲು ಕರವೇ ಒತ್ತಾಯ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬ್ಲಾಕ್ ಪೇಪರ್ ಬಿಡುಗಡೆ: ಮಾಜಿ ಸಿಎಂ ಬಸವರಾಜ… Lokayukta | ಮುಡಾ ಹಗರಣದಲ್ಲಿ ಸಿಎಂಗೆ ಕ್ಲೀನ್ ಚಿಟ್ ನಿರೀಕ್ಷಿತ: ಹುಬ್ಬಳ್ಳಿಯಲ್ಲಿ ಕೇಂದ್ರ…

ಇತ್ತೀಚಿನ ಸುದ್ದಿ

Governor | ಭಾರತದ ಕಡೆ ವಿಶ್ವ ತಿರುಗುತ್ತಿದೆ: ಬಿದನಗೆರೆಯಲ್ಲಿ ನವಗ್ರಹ ದೇಗುಲ ಲೋಕಾರ್ಪಣೆ ನೆರವೇರಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಮತ

23/02/2025, 18:57

ತುಮಕೂರು (reporterkarnataka.com): ಇಂದು ಪ್ರಪಂಚದ ಅನೇಕ ದೇಶಗಳು ಆಧ್ಯಾತ್ಮಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತದ ಕಡೆಗೆ ನೋಡುತ್ತಿವೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಇದಕ್ಕೆ ಜೀವಂತ ಉದಾಹರಣೆಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಅವರು ಇಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಬಿದನಗೆರೆ ಶ್ರೀ ಬಸವೇಶ್ವರ ಮಠದ ನೂತನವಾಗಿ ನಿರ್ಮಿಸಿರುವ ನವಗ್ರಹ ದಂಪತಿ ದೇವಾಲಯ ಹಾಗೂ ನೂತನ ಗೋಪುರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಭಾಷಣದ ಆರಂಭದಲ್ಲಿ ಕನ್ನಡ ದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ಕೋರಿದ ರಾಜ್ಯಪಾಲರು, ಮಠದ ಸಂತರು, ಋಷಿಮುನಿಗಳು, ಆಚಾರ್ಯರು ಮತ್ತು ಶ್ರೇಷ್ಠ ಸಂಪ್ರದಾಯಗಳು ಮತ್ತು ಪ್ರಯತ್ನಗಳಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಸಮಾರಂಭಕ್ಕೆ ಆಗಮಿಸುವ ಮೂಲಕ ನಿಮ್ಮೆಲ್ಲರ ಒಡನಾಟದಲ್ಲಿರುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಇದಕ್ಕಾಗಿ ನಾನು ನಿಮಗೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ತುಮಕೂರು ಜಿಲ್ಲೆ, ಕಲ್ಪತರು ನಾಡಿನ ಕುಣಿಗಲ್ ತಾಲೂಕಿನಲ್ಲಿರುವ “ಬಿದನಗೆರೆ ಬಸವೇಶ್ವರ ಮಠ” ಧಾರ್ಮಿಕ ಸ್ಥಳವಲ್ಲದೆ, ಭಕ್ತರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ಸ್ಫೂರ್ತಿಯ ಮೂಲವಾಗಿದೆ ಮತ್ತು ಸಮುದಾಯಕ್ಕೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಫೂರ್ತಿಯ ಕೇಂದ್ರವಾಗಿದೆ ಎಂದರು.
ಬಸವೇಶ್ವರರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜ ಸುಧಾರಣೆಗೆ ಸಹಕಾರಿಯಾಗಿದೆ. ಇಲ್ಲಿಗೆ ಬರುವ ಜನರು ಬಸವೇಶ್ವರರ ಬೋಧನೆಗಳನ್ನು ಆಸ್ವಾಧಿಸುವ ಜೊತೆಗೆ ಜೀವನದಲ್ಲಿ ನೈತಿಕತೆ, ಸಮಾನತೆ ಮತ್ತು ಭಕ್ತಿಯನ್ನು ಅನುಸರಿಸಲು ಸ್ಫೂರ್ತಿ ಪಡೆಯುತ್ತಾರೆಂದರು.
ನಮ್ಮ ಋಷಿಮುನಿಗಳು, ಮತ್ತು ಗುರುಗಳು ಅನಾದಿ ಕಾಲದಿಂದಲೂ ನಿರಂತರವಾಗಿ ರಕ್ಷಿಸುತ್ತಾ ಬಂದಿರುವ ನಮ್ಮ ಸಂಸ್ಕೃತಿಯು ಶಾಶ್ವತವಾಗಿದೆ. ನಮ್ಮ ಸಂಸ್ಕೃತಿ ಯಾವಾಗಲೂ ವಿಶ್ವ ಭ್ರಾತೃತ್ವ, ವಿಶ್ವ ಶಾಂತಿ ಮತ್ತು ವಿಶ್ವ ಕಲ್ಯಾಣ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ.ಸಾಧುಗಳು, ಸಂತರು, ಆಚಾರ್ಯರು ಮತ್ತು ಋಷಿಮುನಿಗಳು ವಿಶ್ವ ವೇದಿಕೆಯಲ್ಲಿ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಧ್ವಜವನ್ನು ಹಾರಿಸಿದ್ದಾರೆಂದರು.
ಈ ಪವಿತ್ರ ಸ್ಥಳದಲ್ಲಿ ವಿಶ್ವವಿಖ್ಯಾತ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಶ್ರೀ ಶನೇಶ್ವರ ಸ್ವಾಮಿ ಮತ್ತು ನವಗ್ರಹಗಳ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಈ ಪ್ರದೇಶವನ್ನು “ಕರ್ನಾಟಕದ ಶನಿ ಸಿಂಗನಾಪುರ” ಎಂದೂ ಕರೆಯುತ್ತಾರೆ.ಶ್ರೀ ಮಠದ ಪೀಠಾಧೀಶ್ವರರಾದ ಶ್ರೀ ಧನಂಜಯ ಗುರೂಜಿಯವರು ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ರಕ್ಷಕರ ಜೊತೆಗೆ ಚಿಂತನಶೀಲರು ಮತ್ತು ಸಂವೇದನಾಶೀಲರು ಎಂದು ಬಣ್ಣಿಸಿದರು.


ಬಹು ಆಯಾಮದ ಸಂಸ್ಥೆಯಾಗಿರುವ ಈ ಮಠವು ಸಾಮಾಜಿಕ ಪ್ರಗತಿಯಲ್ಲಿ ಮಹತ್ವದ ಕೊಡುಗೆಯನ್ನು ಹೊಂದಿದೆ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ದಾಸೋಹ ಅಂದರೆ ಅನ್ನದಾನವನ್ನು ನೀಡಲಾಗುತ್ತದೆ. ಸಮಾಜದಲ್ಲಿ ಪ್ರಚಲಿತದಲ್ಲಿರುವ ಹಲವಾರು ಸಮಸ್ಯೆಗಳನ್ನು ನಿವಾರಿಸಲು ನಿಮ್ಮಿಂದ ಅನೇಕ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಶ್ಲಾಘಿಸಿದರು.
ಭಾಷಣದ ಕಡೆಯಲ್ಲಿ ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ” ಪ್ರಾರ್ಥನೆಯೊಂದಿಗೆ, ನಾನು ಇಲ್ಲಿ ಇರುವ ಎಲ್ಲಾ ಸಂತರು ಮತ್ತು ಮಹಾಪುರುಷರಿಂದ ಆಶೀರ್ವಾದವನ್ನು ಕೋರುತ್ತೇನೆಂದು ಹೇಳಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ನಾನು ಅನೇಕ ಯಾತ್ರಾಸ್ಥಳಗಳಲ್ಲಿ ನವಗ್ರಹವನ್ನು ನೋಡಿದ್ದೇನೆ, ಆದರೆ ಇಲ್ಲಿ ನಾನು ಗಮನಿಸಿರುವ ಒಂದು ವಿಶೇಷವೆಂದರೆ ಎಲ್ಲಾ ನವಗ್ರಹಗಳನ್ನು ಜೋಡಿಯಾಗಿ ಸ್ಥಾಪಿಸಲಾಗಿದೆ. ಪ್ರತಿ ನವಗ್ರಹ ಜೋಡಿಗೆ ಯಾವ ಸೇವೆ, ಯಾವ ಸ್ತೋತ್ರ ಮತ್ತು ಯಾವ ರೀತಿಯ ಪೂಜೆಯನ್ನು ಮಾಡಬೇಕು ಎಂಬ ವಿವರಗಳನ್ನು ಪ್ರತಿ ವಿಗ್ರಹದ ಕೆಳಗೆ ವಿವರವಾಗಿ ದಾಖಲಿಸಲಾಗಿದೆ ಎಂದು ರಾಜ್ಯಪಾಲರಾದ ಗೆಹ್ಲೋಟ್ ವಿವರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು