11:54 PM Saturday31 - January 2026
ಬ್ರೇಕಿಂಗ್ ನ್ಯೂಸ್
ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ; ಇದುವೇ ಜೀವನ ಮಾರ್ಗ : ಶೃಂಗೇರಿ ಶಾರದಾಪೀಠದ… ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

Good News: ಭಾರತೀಯ ರೈಲ್ವೆ ಇನ್ಮುಂದೆ ನಿಮ್ಮ ಮನೆ ಬಾಗಿಲಿಗೇ ತಲುಪಿಸಲಿದೆ ಪಾರ್ಸೆಲ್‌ !

21/02/2022, 10:10

ಹೊಸದಿಲ್ಲಿ(reporterkarnataka.com):

ಭಾರತೀಯ ರೈಲ್ವೆ ಅಂದರೆ ಅದು ಜನಸಾಮಾನ್ಯರ ಜೀವನದ ಅವಿಭಾಜ್ಯ ಅಂಗ. ಇಲ್ಲಿ ಜನರು ಕೇವಲ ಓಡಾಟ ನಡೆಸುವುದು ಮಾತ್ರವಲ್ಲದೆ, ಅನೇಕ ವಸ್ತುಗಳ ಪಾರ್ಸೆಲ್‌ಗಳನ್ನು ಮಾಡುತ್ತಾರೆ.

ಈ ರೀತಿ ರೈಲ್ವೆಯಲ್ಲಿ ಕಳುಹಿಸಲಾಗುತ್ತಿದ್ದ ಪಾರ್ಸೆಲ್‌ಗಳನ್ನು ರೈಲು ನಿಲ್ದಾಣಕ್ಕೆ ಹೋಗಿ ಪಡೆದುಕೊಂಡು ಬರಬೇಕಿತ್ತು. ಆದರೆ ಇದೀಗ ಇಲಾಖೆ ಜನರಿಗೆ ಇನ್ನಷ್ಟು ಹತ್ತಿರವಾಗಿದೆ.

ಭಾರತೀಯ ರೈಲ್ವೆ ವಿವಿಧ ವಿಷಯಗಳಲ್ಲಿ ಮೇಲ್ದರ್ಜೆಗೆ ಏರುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪಾರ್ಸೆಲ್‌ಗಳನ್ನು ಮನೆ ಬಾಗಿಲಿಗೆ ತರುವ ಯೋಜನೆ ಆರಂಭಿಸಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದು, ಶೀಘ್ರವೇ ಇದು ಜನ ಸಾಮಾನ್ಯರಿಗೆ ಲಭ್ಯವಾಗಲಿದೆ.

ದೇಶದ ಯಾವುದೇ ಮೂಲೆಯಿಂದ ಚಿಕ್ಕಪುಟ್ಟ ವಸ್ತುಗಳಿಂದ ಹಿಡಿದು ಬೃಹದಾಕಾರದ ವಸ್ತುಗಳನ್ನು ಪಾರ್ಸೆಲ್‌ ಕಳುಹಿಸಿದರೆ ಅದು ಯಾರಿಗೆ ತಲುಪಬೇಕೋ ಅವರ ಮನೆಯ ಬಾಗಿಲಿಗೇ ಮುಟ್ಟಲಿದೆ.

ಇದಕ್ಕಾಗಿ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿದ್ದು, ಅದರ ಕುರಿತು ಸಂಪೂರ್ಣ ವಿವರವನ್ನು ರೈಲ್ವೆ ಇಲಾಖೆ ಶೀಘ್ರದಲ್ಲಿ ನೀಡಲಿದೆ. ಬೇರೆಲ್ಲಾ ಕೋರಿಯರ್‌ ಸರ್ವೀಸ್‌ಗಳಂತೆ ಈ ಅಪ್ಲಿಕೇಶನ್ ಸಹಾಯದಿಂದ ವಸ್ತುಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.

ಈಬಗ್ಗೆ ರೈಲ್ವೆಯು ಮನೆ-ಮನೆಗೆ ವಿತರಣಾ ಸೇವೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದೆ. ಈ ಮೂಲಕ ದೂರದ ಊರುಗಳಿಂದ ನಮಗೆ ಬೇಕಾಸ ವಸ್ತುಗಳನ್ನು ರೈಲು ಸೇವೆ ಮೂಲಕವೂ ಸುಲಭವಾಗಿ ಪಡೆಯಬಹುದು ಎಂದು ಇಲಾಖೆ ಹೇಳಿದೆ.

ಇತ್ತೀಚಿನ ಸುದ್ದಿ

ಜಾಹೀರಾತು