ಇತ್ತೀಚಿನ ಸುದ್ದಿ
ಗೋಕರ್ಣ ಪರ್ತಗಳಿ ಜೀವೊತ್ತಮ್ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಹರಿಪಾದದಲ್ಲಿ ಐಕ್ಯ
19/07/2021, 14:49

<ಮಂಗಳೂರು(reporterkarnataka news)
ಶ್ರೀಸಂಸ್ಥಾನ ಗೋಕರ್ಣ ಪರ್ತಗಳಿ ಜೀವೊತ್ತಮ್ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರು ಸೋಮವಾರ ಬೆಳಗ್ಗೆ ಹರಿಪಾದ ಸೇರಿದರು
ಪರ್ತಗಳಿ ಸ್ವಾಮೀಜಿ ಅವರು ಆಷಾಢ ಶುದ್ಧ ದಶಮಿ ತಿಥಿಯ ಮುಂಜಾನೆ ಮಹಾನಿರ್ವಾನರಾದರು.
ಸ್ವಾಮೀಜಿ ತನ್ನ ಅನಂತ ಜ್ಞಾನ, ಆಶೀರ್ವಾದ ಹಾಗೂ ದೈವಿಕ ಅನುಗ್ರಹವನ್ನು ಹಲವು ದಶಕಗಳಿಂದ ಜಿಎಸ್ ಬಿ ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ.
1967 ಫೆಬ್ರವರಿ 26ರಂದು ಅವರು ಮುಂಬೈನ ವಡಾಲಾದ ಶ್ರೀ ರಾಮ್ ಮಂದಿರದಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದರು. 1973 ಏಪ್ರಿಲ್ 5ರಂದು ಗುರುಪೀಠ ಸ್ವೀಕರಿಸಿದರು. ಮುಂದಿನ ದಿನಗಳಲ್ಲಿ ತನ್ನ ಅನುಯಾಯಿಗಳ ಆಧ್ಯಾತ್ಮಿಕ ಉನ್ನತಿಗಾಗಿ ಸಾಕಷ್ಟು ಶ್ರಮಿಸಿದರು.