ಇತ್ತೀಚಿನ ಸುದ್ದಿ
ಗೋ ಸಂರಕ್ಷಣೆಯ ಸಂಕಲ್ಪದ ಗೋ ರಥ ಯಾತ್ರೆ ವಾಮಂಜೂರಿಗೆ ಆಗಮನ: ಬರಮಾಡಿಕೊಂಡ ಶಾಸಕ ಡಾ. ಭರತ್ ಶೆಟ್ಟಿ
01/11/2023, 20:53

ವಾಮಂಜೂರು(reporterkarnataka.com): ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಬ್ರಹ್ಮಗಿರಿ ಬಂಟ್ವಾಳ ಇವರ ನೇತೃತ್ವದಲ್ಲಿ ಗೋ ಸಂರಕ್ಷಣೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಗೋ ರಥ ಯಾತ್ರೆಯ ಭವ್ಯ ರಥ ಇಂದು ವಾಮಂಜೂರಿಗೆ ಆಗಮಿಸಿತು.
ಮಂಗಳೂರು ಉತ್ತರ ಶಾಸಕರ ಡಾ.ವೈ.ಭರತ್ ಶೆಟ್ಟಿ ಅವರು ಸ್ವಾಗತಿಸಿ ಗೋ ಪೂಜೆ ನೆರವೇರಿಸಿದರು .ಈ ಸಂದರ್ಭ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಹಾಗೂ ಹಿಂದೂ ಬಾಂಧವರು ಪಾಲ್ಗೊಂಡು ಗೋ ಮಾತೆಯ ಆಶೀರ್ವಾದ ಪಡೆದರು.