ಇತ್ತೀಚಿನ ಸುದ್ದಿ
Traveling Story | ಗೇರ್‌ಲೆಸ್(ಸಾದಾ) ಸೈಕಲ್‌ನಲ್ಲಿ ಕೇರಳದಿಂದ ಕಾಶ್ಮೀರಕ್ಕೆ ಸೋಲೊ ಟ್ರಿಪ್ ಹೊರಟ 21ರ ಯುವಕ
09/08/2021, 15:52
ಅನುಷ್ ಪಂಡಿತ್, ಮಂಗಳೂರು
ಗಣೇಶ್ ಅದ್ಯಪಾಡಿ, ಮಂಗಳೂರು
info.reporterkarnata@gmail.com
ಟ್ರಾವೆಲಿಂಗ್ ಎನ್ನುವಂತಹದು ಹಲವರಿಗೆ ಕೆಲವರಿಗೆ ಕೆಲಸದ ಅನಿವಾರ್ಯವಾದರೆ ಇನ್ನೂ ಕೆಲವರಿಗೆ ಹುಚ್ಚು. ಅದರಲ್ಲೂ ಪ್ರವಾಸವನ್ನು ರೋಮಾಂಚನವಾಗಿಸಿಕೊಳ್ಳುವ ಮನಸ್ಸು ಹಲವರಿಗೆ. ಹೀಗೆ ರೋಮಾಂಚಕ ಪ್ರವಾಸದ ಅನುಭವವನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲದೊಂದಿಗೆ ಕೇರಳ ಮಣ ಪುರಂನ ಯುವಕ ಕಾಶ್ಮೀರಕ್ಕೆ ಹೊರಟಿದ್ದಾರೆ.
ಕೇರಳದಿಂದ ಕಾಶ್ಮೀರಕ್ಕೆ ಪ್ರವಾಸ ಹೊಸತೇನಲ್ಲ ಆದರೆ ಈ ತರುಣನ ಪ್ರವಾಸದ ವಿಧಾನವೇ ರೋಚಕವಾಗಿದೆ. ಸಾಮಾನ್ಯವಾಗಿ ಹೈ ಎಂಡ್ ಗೇರ್ ಸೈಕಲ್‌ಗಳಲ್ಲಿ ದೂರದೂರುಗಳಿಗೆ ಪ್ರವಾಸಕ್ಕೆ ಹೋಗುವುದು ಸಾಮಾನ್ಯ ಆದರೆ ಕೇರಳದ ಸಫಾನ್ ಎನ್ನುವ ಈ ಕ್ರೇಝಿಯೆಸ್ಟ್ ಯುವಕ ಹೊರಟ್ಟಿದ್ದು ಸಾಮಾನ್ಯ ಹೀರೊ ಸೈಕಲ್‌ನಲ್ಲಿ.
ಪ್ರವಾಸ ಎನ್ನುವುದು ಇವರಿಗೆ ಅತ್ಯಂತ ಪ್ರಿಯವಾದ ವಿಷಯ, ಇಲ್ಲಿಯವರೆಗೆ ಹಿಮಾಚಲ ಪ್ರದೇಶದ ಮನಾಲಿ ಸೇರಿದಂತೆ ಅನೇಕ ಕಡೆಗಳಿಗೆ ಭೇಟಿ ನೀಡಿದ್ದು, ಇದೇ ಮೊದಲ ಬಾರಿ ಸೈಕಲ್‌ನಲ್ಲಿ ಪ್ರವಾಸ ಹೊರಟಿದ್ದಾರೆ.
ಕೇರಳದಿಂದ ಏಳು ದಿನಗಳ ಹಿಂದೆ ಪ್ರಯಾಣ ಆರಂಭಿಸಿದ ಸಫಾನ್ ಇಂದು(ಆ.9) ಮಂಗಳೂರು ತಲುಪಿದ್ದಾರೆ. ಇವತ್ತು ಗೆಳೆಯನ ಮನೆಯಲ್ಲಿ ರೆಸ್ಟ್ ಮಾಡಿ ಮತ್ತೆ ಪಯಣ ಮುಂದುವರಿಸಲಿದ್ದಾರೆ. ಸುಮಾರು ಎರಡು ತಿಂಗಳ ಪ್ರವಾಸದ ಲೆಕ್ಕಾಚಾರ ಮಾಡಿಕೊಂಡಿರುವ ಇವರ ಸೈಕಲಿನಲ್ಲಿ ಮಲಗಲು ಚಾಪೆ, ಬ್ಯಾಗ್ ದಿನಬಳಕೆಗೆ ಬೇಕಾಗುವ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ.
ಕಾಲಲ್ಲಿ ಶೂ ಅಥವಾ ಬೇರೆ ಯಾವುದೇ ಅನಕೂಲಕರ ಚಪ್ಪಲಿ ಇರದೆ ಸಾಮಾನ್ಯ ಚಪ್ಪಲಿ ಧರಿಸಿಕೊಂಡು, ಮಳೆ ಹಾಗೂ ಬಿಸಿಲಿನ ಕಣ್ಕಟ್ಟಿನ ಜೊತೆಗೆ ತಿರುವು-ಮುರುವು ಹಾಗೂ ಏರಿಳಿತಗಳ ದಾರಿಯಲ್ಲಿ ಧರೆಯ ಸ್ವರ್ಗಕ್ಕೆ ದೇವರನಾಡಿನಿಂದ ಹೊರಟ ಯುವಕನ ಈ ಧೈರ್ಯವನ್ನು ಮೆಚ್ಚಲೆಬೇಕು.
ಡಿಪ್ಲೊಮಾ ಕಲಿಯುತ್ತಿರುವ ಸಫಾನ್ ಈಗಿನ ಖಾಲಿ ಸಮಯದಲ್ಲಿ ಟ್ರಾವೆಲಿಂಗ್ ಹೊರಟಿದ್ದಾರೆ. ಸೈಕಲ್‌ನಲ್ಲಿ ಕೇರಳ ಟು ಕಾಶ್ಮೀರ್ ಎಂದು ಸ್ಟಿಕರ್ ಅಂಟಿಸಿಕೊಂಡಿದ್ದು Al_Azhar ಎನ್ನುವ ತಮ್ಮ ಇನ್ಸ್ಟಾ ಐಡಿಯನ್ನು ಮೆನ್ಶನ್ ಮಾಡಿದ್ದಾರೆ.