ಇತ್ತೀಚಿನ ಸುದ್ದಿ
ಗ್ಯಾಸ್ ಲಾರಿ-407 ವಾಹನ ಮುಖಾಮುಖಿ ಡಿಕ್ಕಿ; ಇಬ್ಬರೂ ಚಾಲಕರಿಗೆ ತೀವ್ರ ಗಾಯ; 1 ತಾಸು ಸಂಚಾರ ಸ್ಥಗಿತ
17/10/2023, 14:25

ಸಂತೋಷ್ ಅತ್ತಗೆರೆ ಚಿಕ್ಕಮಗಳೂರು
info.repoterkarnataka@gmail.com
ಕೊಟ್ಟಿಗೆಹಾರ ಬಳಿ ಗ್ಯಾಸ್ ಲಾರಿ ಮತ್ತು ಎಳೆನೀರು ತುಂಬಿದ 407 ಮಿನಿ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರೂ ಚಾಲಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ರಭಸಕ್ಕೆ 407 ವ್ಯಾನ್ ರಸ್ತೆ ಗೆ ಪಲ್ಟಿಯಾಗಿದೆ. ಗ್ಯಾಸ್ ಲಾರಿನ ಚಾಲಕ ಲಾರಿ ಒಳಗೆ ಸಿಲುಕಿಕೊಂಡಿದ್ದರು. ಚಾಲಕನನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸ ಪಡಬೇಕಾಯಿತು.ಅಪಘಾತದ ಪರಿಣಾಮ ಒಂದು ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಬಣಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಟ್ರಾಫಿಕ್ ಕಂಟ್ರೋಲ್ ಮಾಡಿದ್ದಾರೆ.