ಇತ್ತೀಚಿನ ಸುದ್ದಿ
ಗಾಂಜಾ ಸೇವನೆ: ತೆಕ್ಕಟ್ಟೆಯಲ್ಲಿ ವ್ಯಕ್ತಿ ಪೊಲೀಸ್ ವಶಕ್ಕೆ; ವೈದ್ಯಕೀಯ ಪರೀಕ್ಷೆ
18/09/2022, 15:02
ಕೋಟ(reporterkarnataka.com): ಗಾಂಜಾ ಸೇವನೆಗೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಕೋಟ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತೆಕ್ಕಟ್ಟೆ ಗ್ರಾಮದ ಕನ್ನುಕೆರೆ ಜಂಕ್ಷನ್ ಬಳಿ ನಡೆದಿದೆ.
ಸ್ಥಳೀಯ ನಿವಾಸಿ ಇಲಿಯಾಸ್ ಪೊಲೀಸರು ವಶಕ್ಕೆ ಪಡೆದಕೊಂಡ ಆರೋಪಿ. ಈತ ಕನ್ನುಕೆರೆ ಜಂಕ್ಷನ್ ಬಳಿ ಅಮಲು ಪದಾರ್ಥ ಸೇವಿಸಿದಂತೆ ಕಂಡುಬಂದಿದ್ದು, ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.