2:35 PM Friday30 - January 2026
ಬ್ರೇಕಿಂಗ್ ನ್ಯೂಸ್
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ…

ಇತ್ತೀಚಿನ ಸುದ್ದಿ

ಗಣೇಶೋತ್ಸವಕ್ಕೆ ಕಾಂಗ್ರೆಸ್‌ ಸರಕಾರ ಯಾವುದೇ ಅಡ್ಡಿ ಮಾಡಿಲ್ಲ; ಶಾಸಕ ಕಾಮತ್ ಸಂಕುಚಿತ ಭಾವನೆಯಿಂದ ಹೊರಬರಲಿ: ಪದ್ಮರಾಜ್ ಆರ್.

06/09/2024, 21:54

ಮಂಗಳೂರು(reporterkarnataka.com): ಗಣೇಶೋತ್ಸವ ಸೇರಿದಂತೆ ಯಾವುದೇ ಹಬ್ಬಗಳಿಗೆ ಕಾಂಗ್ರೆಸ್‌ ಸರಕಾರ ಎಂದೂ ತೊಡಕುಂಟುಮಾಡಿಲ್ಲ. ಅದರ ಬಗ್ಗೆ ಯಾರಿಗೂ ಆತಂಕ ಬೇಡ. ಶಾಸಕ ವೇದವ್ಯಾಸ ಕಾಮತ್ ಅವರು ಸಂಕುಚಿತ ಭಾವನೆಯಿಂದ ಹೊರಬರಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಹೇಳಿದ್ದಾರೆ.
ಗಣೇಶೋತ್ಸವ ಆಚರಣೆಗೆ ಸರ್ಕಾರ ಅಡ್ಡಿಪಡಿಸುತ್ತಿದೆ ಎಂಬ ಶಾಸಕ ವೇದವ್ಯಾಸ ಕಾಮತ್‌ ಹೇಳಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ಖಂಡಿಸಿರುವ ಅವರು, ಬಿಜೆಪಿ ಅವಧಿಯಲ್ಲೂ ಗಣೇಶೋತ್ಸವ ಆಚರಣೆಗೆ ಅನುಮತಿ ಪಡೆಯುವ ನಿಯಮ ಇತ್ತು. ಸುವ್ಯವಸ್ಥಿತ ರೀತಿಯಲ್ಲಿ ಹಬ್ಬ ಆಚರಿಸಲು ಕಾಲಕಾಲಕ್ಕೆ ನಿಯಮಗಳಲ್ಲಿ ಮಾರ್ಪಾಟು ಮಾಡಲಾಗುತ್ತದೆ ಎಂದರು.
ಮುಂಜಾಗ್ರತೆ ಕ್ರಮವಾಗಿ ಆಯೋಜಕರಿಂದ ಸೂಕ್ತ ಮಾಹಿತಿ ಕೇಳುವುದರಲ್ಲಿ ತಪ್ಪೇನಿದೆ? ಮಾಹಿತಿ ಕೇಳಿದ ಮಾತ್ರಕ್ಕೆ ಹಬ್ಬ ನಿಲ್ಲಿಸುವ ಹುನ್ನಾರ ಅಂತ ಏಕೆ ಹೇಳುತ್ತೀರಿ ಎಂದು ಪದ್ಮರಾಜ್ ಪ್ರಶ್ನಿಸಿದರು.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ
ಮೌಖಿಕ ಆದೇಶದ ಮೇರೆಗೆ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿರುವ ವೇದವ್ಯಾಸ ಕಾಮತ್‌ ತಾವು ಈ ಕ್ಷೇತ್ರದ ಶಾಸಕರು ಎಂಬುದನ್ನೇ ಮರೆತಿದ್ದಾರೆ. ನೀವೇ ಶಾಸಕರು, ನಿಮ್ಮದೇ ಪಕ್ಷದ ಆಡಳಿತ ಮಹಾನಗರ ಪಾಲಿಕೆಯಲ್ಲಿದೆ. ಹೀಗಿರುವಾಗ ಶಾಸಕರಾಗಿ ಸಂಚಾರ ಸಮಸ್ಯೆ ಪರಿಹರಿಸಲು ಯಾವ ಕ್ರಮ ಕೈಗೊಂಡಿದ್ದೀರಿ? ಈ ಬಗ್ಗೆ ಉಸ್ತುವಾರಿ ಸಚಿವರ ಬಗ್ಗೆ ಚರ್ಚೆ ನಡೆಸಿದ್ದೀರಾ? ಅವರೇನಾದರೂ ನಿಮ್ಮ ಸಲಹೆ ನಿರ್ಲಕ್ಷಿಸಿದ್ದಾರಾ ಎಂದು ಪದ್ಮರಾಜ್‌ ಪ್ರಶ್ನಿಸಿದರು.
ಅಂದಿನ‌ ಬಿಜೆಪಿ ಸರಕಾರವೇ
ರಾಜ್ಯದಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಜಾರಿ ಮಾಡಿತ್ತು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ತೆರಿಗೆ ಏರಿಕೆ ಮಾಡೇ ಇಲ್ಲ. ನೀರಿನ ಬೆಲೆಯನ್ನೂ 3 ಪಟ್ಟು ಏರಿಸಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ 25 ಸಾವಿರ ಲೀ. ನೀರನ್ನು 65 ರೂ.ಗೆ ನೀಡಲಾಗುತ್ತಿತ್ತು. ಬಿಜೆಪಿ ಆಡಳಿತದಲ್ಲಿ ಈಗ 8 ಸಾವಿರ ಲೀ.ಗೆ 135 ರೂ. ವಸೂಲಿ ಮಾಡಲಾಗುತ್ತಿದೆ ಎಂದರು.
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಪ್ರೇಮ್‌ ಬಲ್ಲಾಳ್‌ಬಾಗ್‌ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು