ಇತ್ತೀಚಿನ ಸುದ್ದಿ
ಗಣೇಶ ಚತುರ್ಥಿ: ದಕ್ಷಿಣ ಕನ್ನಡ ಜಿಲ್ಲೆಗೆ ಸೆಪ್ಟೆಂಬರ್ 19ರಂದು ಸರಕಾರಿ ರಜೆ
14/09/2023, 23:58

ಮಂಗಳೂರು(reporterkarnataka.com): ಈ ಬಾರಿ ಗಣೇಶ ಹಬ್ಬಕ್ಕೆ ಸೆಪ್ಟೆಂಬರ್ 18ರ ಬದಲು ಸೆಪ್ಟೆಂಬರ್ 19ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
ಸೆ.19ರಂದು ರಜೆ ನೀಡಲು ಸೂಚಿಸಿದ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಗಣೇಶ ಹಬ್ಬಕ್ಕೆ ಸೆ. 19ರಂದು ರಜೆ ಇರಲಿದೆ. ರಾಜ್ಯಾದ್ಯಂತ ಸೆ.18ರಂದು ಗಣೇಶ ಚತುರ್ಥಿಗೆ ಸರ್ಕಾರಿ ರಜೆ ಇರಲಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಮಾತ್ರ ಸೆ.19ಕ್ಕೆ ಗಣೇಶ ಚತುರ್ಥಿ ಹಿನ್ನಲೆ ಸರಕಾರಿ ರಜೆ ಕೊಡಲಾಗಿದೆ.