9:03 AM Tuesday25 - November 2025
ಬ್ರೇಕಿಂಗ್ ನ್ಯೂಸ್
Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ…

ಇತ್ತೀಚಿನ ಸುದ್ದಿ

ಗಾಂಧೀಜಿಯನ್ನೇ ನಾವು ಬಿಟ್ಟಿಲ್ಲ ಸ್ವಾಮಿ, ಇನ್ನು ನಿಮ್ಮನ್ನು ಬಿಡುತ್ತೇವೆಯೇ: ಬಿಜೆಪಿ ನಾಯಕರಿಗೆ ಹಿಂದೂ ಮಹಾಸಭಾ ಪ್ರಶ್ನೆ

18/09/2021, 18:23

ಮಂಗಳೂರು(reporterkarnataka.com): ಮೈಸೂರಿನಲ್ಲಿ 800 ವರ್ಷ ಪುರಾತನವಾದ ದೇಗುಲವನ್ನು ಧ್ವಂಸ ಮಾಡಿರುವ ಕುರಿತು ಗರಂ ಆಗಿರುವ ಅಖಿಲ ಭಾರತ ಹಿಂದೂ ಮಹಾಸಭಾ ವಿವಾದಾತ್ಮಕ ಹೇಳಿಕೆ ನೀಡಿದ್ದು, ಗಾಂಧೀಜಿಯವರನ್ನೇ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡುತ್ತೇವೆಯೇ ಎಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಪ್ರಶ್ನಿಸಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಮಾತನಾಡಿ, ಹಿಂದೂ ವಿರೋಧಿಯಾಗಿದ್ದರು ಎಂಬ ಕಾರಣಕ್ಕೆ ಗಾಂಧೀಜಿಯವರನ್ನೇ ಬಿಟ್ಟಿಲ್ಲ ಸ್ವಾಮಿ, ಅವರನ್ನು ಹತ್ಯೆ ಮಾಡಲಾಯಿತು. ಇನ್ನು ನಿಮ್ಮನ್ನು ಬಿಡುತ್ತೇವಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪಿಸಿ ಪ್ರಶ್ನಿಸಿದರು.

ಬಿಜೆಪಿ ನಾಯಕರು ನಮ್ಮಿಂದ ಒಂದು ಸಣ್ಣ ತಪ್ಪಾಗಿದೆ. ಅದೇ ಜಾಗದಲ್ಲಿ ಮತ್ತೆ ದೇಗುಲ ಕಟ್ಟಿಕೊಡುತ್ತೇವೆ ಎಂದು ಹೇಳಿದ್ದಾರೆ. 800 ವರ್ಷ ಪುರಾತನವಾದ ದೇಗುಲ ಕೆಡವಿರುವುದು ಸಣ್ಣ ತಪ್ಪಾ? ಹಾಗಾದರೆ ದೊಡ್ಡ ತಪ್ಪು ಯಾವುದು?  ದೇಶವನ್ನು ಮಾರಿ ಬಿಡುವುದೇ? ಯಾವುದೇ ಸಚಿವರಾಗಲಿ, ಶಾಸಕರು- ಸಂಸದರಾಗಲಿ ಇಂತಹ ಬಾಲಿಶ ಹೇಳಿಕೆ ನೀಡಬಾರದು. ದೇಗುಲ ಮತ್ತೆ ನಿರ್ಮಿಸಿಕೊಡುವುದು ಎಂದರೆ ಜನರ ತೆರಿಗೆ ಹಣದಿಂದ ಸರಕಾರಿ ದುಡ್ಡಿನಲ್ಲಿ ಕಟ್ಟಿಕೊಡುವುದು ಬೇಡ. ಬದಲಿಗೆ ದೇಗುಲ ಧ್ವಂಸಕ್ಕೆ ಯಾರು ಕಾರಣಕರ್ತರಾಗಿದ್ದಾರೆಯೋ ಅವರ ಆಸ್ತಿ ಮಾರಿ ದೇವಸ್ಥಾನ ಕಟ್ಟಿ ಕೊಡಲಿ ಎಂದು ಅವರು ನುಡಿದರು.

ಬಿಜೆಪಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಓಲೈಕೆ ಮಾಡಲು ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದೆ. ಸಂಘ ಪರಿವಾರಕ್ಕೆ ಹಾಗೂ ಬಿಜೆಪಿ ಸಹ ಪರಿವಾರಕ್ಕೆ ದಮ್ಮು ಇದ್ದರೆ ಅದು ಹಿಂದೂ ಮಹಾಸಭಾವನ್ನು ಬೆಂಬಲಿಸಬೇಕು ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು