ಇತ್ತೀಚಿನ ಸುದ್ದಿ
ಗಣರಾಜ್ಯೋತ್ಸವ ಪಥ ಸಂಚಲನ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ 6 ಮಂದಿ ಸ್ವಯಂಸೇವಕರು ಆಯ್ಕೆ
25/01/2022, 21:18
ಮಂಗಳೂರು(reporterkarnataka.com):.ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ಗಣರಾಜ್ಯೋತ್ಸವ ದಿನದ ಪಥಸಂಚಲನದಲ್ಲಿ ಭಾಗವಹಿಸಲು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ 6 ಮಂದಿ ಸ್ವಯಂಸೇವಕರು ಆಯ್ಕೆಯಾಗಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಭಾವನ, ಕಾರ್ಕಳ ವೆಂಕಟರಮಣ ವುಮೆನ್ಸ್ ಕಾಲೇಜಿನ ಶ್ರೀನಿಧಿ ನಾಯಕ್, ಉಜಿರೆ ಎಸ್ ಡಿಎಂ ಕಾಲೇಜಿನ ಹೃತಿಕ್ ಎಚ್. ಎ., ಬೆಳ್ತಂಗಡಿ ಗುರುದೇವ ಕಾಲೇಜಿನ ಪ್ರೇಮ್ ಸಾಗರ್, ಮಂಗಳೂರು ಕೆನರಾ ಕಾಲೇಜಿನ ಮನೀಶ್ ಹಾಗೂಮಂಗಳೂರು ಎಸ್ ಡಿಎಂ ಕಾಲೇಜಿನ ರಿತೇಶ್ ಶೆಟ್ಟಿ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ. ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ