ಇತ್ತೀಚಿನ ಸುದ್ದಿ
ಗಜಪಡೆ ದಾಂಧಲೆ: ತರೀಕೆರೆಯಲ್ಲಿ ಅಡಿಕೆ, ಬಾಳೆ ತೋಟ ನಾಶ; ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
02/01/2023, 01:05

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಡಾನೆಗಳ ದಾಂಧಲೆ ನಾಲ್ಕು ಎಕರೆ ಅಡಿಕೆ ಹಾಗೂ ಬಾಳೆ ನಾಶವಾದ ಘಟನೆ ತರೀಕೆರೆ ತಾಲೂಕಿನ ನಂದಿಬಟ್ಲು ಗ್ರಾಮದಲ್ಲಿ ನಡೆದಿದೆ.
ಕಾಡಾನೆ ದಾಳಿಯಿಂದ ಬೆಳೆ ಕಳೆದುಕೊಂಡ ರೈತರು
ಕಂಗೆಟ್ಟು ಹೋಗಿದ್ದಾರೆ. ಕಾಡಾನೆಗಳು ಹಿಂಡು-ಹಿಂಡಾಗಿ ಕೃಷಿ ಭೂಮಿಯನ್ನ ದ್ವಂಸ ಮಾಡ್ತಿವೆ.
ಕಾಡಾನೆಗಳು ಕೃಷಿ ಭೂಮಿಯತ್ತ ಆಗಮಿಸ್ತಿರೋ ಹಿನ್ನೆಲೆ ಅರಣ್ಯ ಇಲಾಖೆ ವಿರುದ್ದ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ತಣಿಗೆಬೈಲು ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳ ಭೇಟಿ ನೀಡಿದ್ದಾರೆ.ಬೆಳೆ ಕಳೆದುಕೊಂಡ ರೈತರು ಸೂಕ್ತ ಪರಿಹಾರಕ್ಕೆ ಅಗ್ರಹಿಸಿದ್ದಾರೆ.