9:06 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಗಡಿಪಾರು ಅಸ್ತ್ರ ದಿಂದ ಹಿಂದೂ ಸಂಘಟನೆ ಬಲ ಕುಗ್ಗಿಸಲು ಕಾಂಗ್ರೆಸ್ ಯತ್ನ: ಶಾಸಕ ಡಾ.ಭರತ್ ಶೆಟ್ಟಿ ಆರೋಪ

16/11/2023, 21:12

ಸುರತ್ಕಲ್ (reporterkarnataka.com): ಗಡಿಪಾರು ಆದೇಶ, ರೌಡಿಶೀಟರ್ ಕಾನೂನು ಆಸ್ತ್ರ ಬಳಸಿ ಪ್ರಬಲವಾಗಿ ಬೆಳೆಯುತ್ತಿರುವ ಹಿಂದೂ ಸಂಘಟನೆಯ ಬಲ ಕುಗ್ಗಿಸಲು ಕಾಂಗ್ರೆಸ್ ಪರೋಕ್ಷವಾಗಿ ಯತ್ನಿಸುತ್ತಿದ್ದು, ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ವಿಧಿಸಿರುವ ಗಡಿಪಾರು ಆದೇಶ ಇದರ ವಿರುದ್ದ ಪ್ರಬಲ ಪ್ರತಿ ಹೋರಾಟ ಮಾಡಲಾಗುವುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.
ಹಿಂದೂ ಕುಟುಂಬಗಳಿಗೆ ಅದರಲ್ಲೂ ಅಪ್ರಾಪ್ತ ಹಿಂದೂ ಯುವತಿಯನ್ನು ಅನ್ಯಮತೀಯ ಪುಸಲಾಯಿಸಿ ಜೀವನ ಹಾಳು ಮಾಡುವುದನ್ನು ತಡೆದ ನಾಲ್ವರು ಹಿಂದೂ ಯವ ಕಾರ್ಯಕರ್ತರ ಮೇಲೆ ಅಪಹರಣ ಕೇಸು ದಾಖಲು ಮಾಡಿ ಪೊಲೀಸ್ ಇಲಾಖೆ ಮೂಲಕ ದಬ್ಬಾಳಿಕೆ ಮಾಡುತ್ತಿದೆ.
ಹಿಂದೂ ಯುವತಿಯರ ನೆರವಿಗೆ ಬರುವ ಹಿಂದೂ ಕಾರ್ಯಕರ್ತರನ್ನು ಕ್ರಿಮಿನಲ್ ಗಳಂತೆ ಕಾಂಗ್ರೆಸ್ ಸರಕಾರ ನೋಡುತ್ತಿದೆ.
ಹಿಂದೂ ಮುಖಂಡರು, ಕಾರ್ಯಕರ್ತರು ಕಾರಣವಿಲ್ಲದೆ ಯಾರದೇ ತಂಟೆಗೆ ಹೋಗುವುದಿಲ್ಲ.ಆದರೆ ಹಿಂದೂ ಸಮಾಜದ ಅಸ್ಮಿತೆಗೆ ದಕ್ಕೆ ಬಂದಾಗ ಹೋರಾಟ ಮಾಡುತ್ತಾರೆ.ಪೊಲೀಸ್ ಠಾಣೆಯಲ್ಲಿ ಈ ಮೂಲಕ ದಾಖಲಾದ ಸಣ್ಣಪುಟ್ಟ ಕೇಸ್ ಆಧಾರವಾಗಿಸಿ ಗಡಿಪಾರು ಆದೇಶ ಮಾಡುವುದನ್ನು ನೋಡಿದರೆ ಹಿಂದೂ ಸಂಘಟನೆಗಳ ಬಗ್ಗೆ ಸರಕಾರಕ್ಕೆ ಭೀತಿಯಿರುವಂತೆ ಕಾಣುತ್ತದೆ. ಪುತ್ತೂರಿನ ಕಾರ್ಯಕರ್ತರ ಗಡಿಪಾರು ಆದೇಶ ಹಿಂಪಡೆಯಬೇಕು ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು