ಇತ್ತೀಚಿನ ಸುದ್ದಿ
ಗದ್ದಲ, ಅಮಾನತು, ಸಭಾತ್ಯಾಗದೊಂದಿಗೆ ಬಜೆಟ್ ಅಧಿವೇಶನ ಸಮಾಪನ: ಸ್ಪೀಕರ್ ಖಾದರ್ ಅವರಿಂದ ಕಲಾಪಗಳ ವಿವರ
22/07/2023, 12:15
ಬೆಂಗಳೂರು(reporterkarnataka.com): ರಾಜ್ಯಪಾಲರ ಭಾಷಣದೊಂದಿಗೆ ಜುಲೈ 3ರಂದು ಆರಂಭವಾದ 16ನೇ ವಿಧಾನಸಭೆಯ ಉಭಯ ಸದನಗಳ ಜಂಟಿ ಅಧಿವೇಶನ ವಾದ- ವಿವಾದ, ಗದ್ದಲ, ಅಮಾನತು, ಸಭಾತ್ಯಾಗದೊಂದಿಗೆ ಮುಕ್ತಾಯಗೊಂಡಿದ್ದು, ವಿಧಾನ ಸಭೆಯಲ್ಲಿ ನಡೆದ ಕಾರ್ಯಕಲಾಪಗಳ ವರದಿಯನ್ನು ಸಭಾಧ್ಯಕ್ಷ ಯು.ಟಿ. ಖಾದರ್ ಮಾಧ್ಯಮಗಳಿಗೆ ನೀಡಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಲ್ಲಿ 34 ಸದಸ್ಯರು 12 ಗಂಟೆ ಮತ್ತು 39 ನಿಮಿಷಗಳ ಕಾಲ ಭಾಗವಹಿಸಿರುತ್ತಾರೆ ಎಂದ ಸ್ಪೀಕರ್ ಅಧಿವೇಶನದಲ್ಲಿ ಒಟ್ಟು 1049 ಪ್ರಶ್ನೆಗಳನ್ನು ಅಂಗೀಕರಿಸಲಾಯಿತು ಎಂದು ಹೇಳಿದರು.
15 ದಿನಗಳ ಕಾಲ ನಡೆದ ವಿಧಾನಸಭಾ ಅಧಿವೇಶನದಲ್ಲಿ ಒಟ್ಟು 78 ಗಂಟೆ 25 ನಿಮಿಷ ಕಾರ್ಯಕಲಾಪಗಳು ನಡೆದವು ಎಂದು ಖಾದರ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ಮಂಡಿಸಿದ ಬಜೆಟ್-2023 ಅನ್ನು ಜುಲೈ 20 ರಂದು ಅಂಗೀಕರಿಸಲಾಯಿತು ಎಂದು ಸಭಾಪತಿ ಹೇಳಿದರು.
3ರಂದು ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾದ 16ನೇ ವಿಧಾನಸಭೆಯ ಉಭಯ ಸದನಗಳ ಜಂಟಿ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿತು.