ಇತ್ತೀಚಿನ ಸುದ್ದಿ
ಗಬ್ಬದ ಹಸು ಕದ್ದು ಕೊಂದ ಪ್ರಕರಣ: ಕೊಂಡಂಗೇರಿಯ 3 ಮಂದಿ ಆರೋಪಿಗಳ ಬಂಧನ
16/09/2025, 19:08

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ಮೈತಾಡಿ ಗ್ರಾಮದ ನಿವಾಸಿ ಬೊಳ್ಳಪಂಡ ಎಂ.ಭೀಮಯ್ಯ ಅವರ ಒಂದು ಹಸು ಕಳ್ಳತನವಾಗಿರುವ ಕುರಿತು ದೂರನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ನೀಡಿದ ಅನ್ವಯ ಪೊಲೀಸರು ಶೀಘ್ರಗತಿಯಲ್ಲಿ ತನಿಖೆ ಕೈಗೊಂಡು ಮೂರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಹೇಶ್ ಕುಮಾರ್.ಎಸ್, ಡಿ.ಎಸ್.ಪಿ, ವಿರಾಜಪೇಟೆ ಉಪವಿಭಾಗ, ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಠಾಣಾಧಿಕಾರಿ ಲತಾ.ಎನ್.ಜೆ, ವಾಣಿಶ್ರೀ, ಪಿಎಸ್‌ಐ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಸಾಜನ್, ಜೋಸ್ ನಿಶಾಂತ್, ಸಂತೋಷ್ ಚೌಹನ್, ಅಬ್ದುಲ್ ಮಜೀದ್, ಬೋಪಣ್ಣ ರವರುಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಸೆಪ್ಟೆಂಬರ್ 13 ರಂದು 3 ಜನ ಆರೋಪಿಗಳಾದ, ಮೊಹಮ್ಮದ್ ಆಶಿಕ್, 22 ವರ್ಷ, ಕೊಂಡಂಗೇರಿ ಗ್ರಾಮ, ಶಾಹಿದ್, 25 ವರ್ಷ, ಕೊಂಡಂಗೇರಿ ಗ್ರಾಮ,ಹ್ಯಾರೀಸ್, 34 ವರ್ಷ ಕೊಂಡಂಗೇರಿ ಗ್ರಾಮ. ಇವರುಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳು ಇನ್ನಷ್ಟು ಇದೇ ರೀತಿಯ ಹಸು ಕಳ್ಳತನ ಕೃತ್ಯಗಳನ್ನು ನಡೆಸಿರುವ ಶಂಕೆ ಇದ್ದು ಪೊಲೀಸರ ತನಿಕೆಯಿಂದ ಬಯಲಾಗಬೇಕಾಗಿದೆ. ಈ ಭಾಗದಲ್ಲಿ ಹಲವರು ಈಗಾಗಲೇ ತಮ್ಮ ಹಸುಗಳನ್ನು ಕಳೆದುಕೊಂಡಿದ್ದಾರೆ.