ಇತ್ತೀಚಿನ ಸುದ್ದಿ
ಘಾನಾ: ಎಬೋಲಾ ಮಾದರಿಯ ಹೊಸ ಕಾಯಿಲೆ ಪತ್ತೆ; ಇಡೀ ವಿಶ್ವಕ್ಕೆ ಮತ್ತೆ ಎಚ್ಚರಿಕೆ ಗಂಟೆ
18/07/2022, 21:51
ಸೆಹಗಲ್(reporterkarnataka.com): ಆಪ್ರಿಕಾ ಖಂಡದ ಘಾನ ದೇಶದಲ್ಲಿ ಮತ್ತೊಂದು ನಿಗೂಢ ಕಾಯಿಲೆವೊಂದು
ಪತ್ತೆಯಾಗಿದೆ. ಇದು ಮಾರಣಾಂತಿಕ ಎಬೋಲಾ ರೋಗ ಲಕ್ಷಣ ಹೊಂದಿದ್ದು, ಈ ಮಾರ್‍ಬುರ್ಗ್ ಸೋಂಕು ಎಂದು ಹೆಸರಿಸಲಾಗಿದೆ ಈಗಾಗಲೇ ಈ ರೋಗದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಜು.10 ರಂದು ಸೋಂಕು ಪತ್ತೆಯಾಗಿದ್ದು ಅದರ ಸ್ಯಾಂಪಲ್ ಗಳನ್ನು ಸೆಹಗಲ್‌ನ ಪ್ರಯೋಗಾಲಯದಲ್ಲಿ ಕಳಿಸಿಕೊಡಲಾಗಿತ್ತು. ಆದರೆ ಪರೀಕ್ಷೆಗೊಳಪಡಿಸಿ ದೃಢಪಡಿಸಿದಾಗ ಮಾರ್ಬುರ್ಗ್ ಕಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಘಾನಾ ಆರೋಗ್ಯ ಇಲಾಖೆ, ಸೋಂಕು ಪತ್ತೆಯಾದ ಕ್ಷಣದಿಂದ ದೇಶದಾದ್ಯಂತ ಹರಡುವಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಸಮಜಾಯಿಷಿ ನೀಡಿದೆ .