ಇತ್ತೀಚಿನ ಸುದ್ದಿ
ಗಾನ ನಿಲ್ಲಿಸಿದ ಗಾನ ಕೋಗಿಲೆ: ಬಲಿಪ ನಾರಾಯಣ ಭಾಗವತರು ಇನ್ನಿಲ್ಲ
16/02/2023, 22:13
ಮಂಗಳೂರು(reporterkarnataka.com): ತೆಂಕುತಿಟ್ಟು ಯಕ್ಷ ರಂಗದ ಖ್ಯಾತ ಭಾಗವತರಾದ ಬಲಿಪ ನಾರಾಯಣ ಭಾಗವತರು ಇಂದು ಸಂಜೆ ನಿಧನರಾದರು. ಇದರೊಂದಿಗೆ ಗಾನ ಕೋಗಿಲೆ ತನ್ನ ಹಾಡು ನಿಲ್ಲಿಸಿದೆ.
ಗುರುವಾರ ಸಂಜೆ ಸುಮಾರು 6.30ರ ವೇಳೆಗೆ ಬಲಿಪ ನಾರಾಯಣ ಭಾಗವತರು ಅಸ್ತಂಗತರಾದರು. ಅವರ ಅಂತಿಮ ವಿಧಿ ವಿಧಾನ ಇಂದು ತಡರಾತ್ರಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.














